SSLC ಫಲಿತಾಂಶಕ್ಕೆ ಕೊಳ್ಳಿ ಇಟ್ಟ ಸರ್ಕಾರ ಉರ್ದು ಕಾಲೇಜು ಆರಂಭಿಸಲು ಮುಂದಾಗಿದೆ; ಸರ್ಕಾರದ ವಿರುದ್ಧ BJP ವಾಗ್ದಾಳಿ

ಬೆಂಗಳೂರು: ಉರ್ದು ಪದವಿ ಪೂರ್ವ ಕಲೇಜು ಆರಂಭಿಸಲು ಮುಂದಗೈರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಕನ್ನಡ ಓದಲು ಬರೆಯಲು ಬಾರದ ಅನಕ್ಷರಸ್ಥ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ನಿಜಕ್ಕೂ ತಲೆ ಕಟ್ಟಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಿ ಮಕ್ಕಳ ಭವಿಷ್ಯಕ್ಕೆ ಬೆಂಕಿ ಇಟ್ಟ ಸಚಿವರು, ಇದೀಗ ಉರ್ದು ಶಿಕ್ಷಣದ ಮೂಲಕ ಮುಸ್ಲಿಮರನ್ನು ಮತ್ತೆ ಹಳೆ ತಲೆಮಾರಿಗೆ ನೂಕಲಾಗುತ್ತಿದೆ ಎಂದು ಕಿಡಿಕಾರಿದೆ.

ಕರ್ನಾಟಕದಲ್ಲಿ ಕನ್ನಡವನ್ನು ಕೊಲೆ ಮಾಡಿ ಪಾರ್ಸಿಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದ್ದ ಟಿಪ್ಪುವಿನಂತೆ ಸಿದ್ದರಾಮಯ್ಯ ಸರ್ಕಾರ, ಇದೀಗ ಸರ್ಕಾರಿ ಉರ್ದು ಪದವಿ ಪೂರ್ವ ಕಾಲೇಜು ಆರಂಭಿಸಲು ಮುಂದಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಮಾಡಿ ರಾಜ್ಯ ಶಿಕ್ಷಣ ನೀತಿಯನ್ನು ಜಾರಿ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ SSLC ಫಲಿತಾಂಶಕ್ಕೆ ಕೊಳ್ಳಿ ಇಟ್ಟಿತ್ತು. ಇದೀಗ ಕಾಲೇಜಿಗೆ ದಾಖಲಾಗುವ ವಿದ್ಯಾರ್ಥಿಗಳ ಪ್ರಮಾಣ ಸಂಪೂರ್ಣ ಕುಸಿದಿರುವಾಗ, ಉರ್ದು ಕಾಲೇಜು ಆರಂಭಿಸುತ್ತಿದೆ. ನೆಲ, ಜಲ, ಭಾಷೆಯ ವಿಚಾರದಲ್ಲಿ ಕರ್ನಾಟಕದ ಅಸ್ಮಿತೆಯನ್ನು ಕೊನೆಗಾಣಿಸುವ ಗುರಿಯನ್ನು ಕಾಂಗ್ರೆಸ್‌ ಸರ್ಕಾರ ಹಾಕಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read