‘ಗ್ಯಾರಂಟಿಗಳನ್ನು ನಂಬಿ ಮೋಸ ಹೋದ ಕನ್ನಡಿಗರಿಗೆ ತೆರಿಗೆಯ ಬರೆ’ : ಬಜೆಟ್ ಕುರಿತು ಬಿಜೆಪಿ ಲೇವಡಿ

ಬೆಂಗಳೂರು : ‘ಗ್ಯಾರಂಟಿಗಳನ್ನು ನಂಬಿ ಮೋಸ ಹೋದ ಕನ್ನಡಿಗರಿಗೆ ತೆರಿಗೆಯ ಬರೆ’ ಎಂದು ಸಿದ್ದರಾಮಯ್ಯ ಬಜೆಟ್ ಬಗ್ಗೆ ಬಿಜೆಪಿ ಲೇವಡಿ ಮಾಡಿದೆ.

ರಾಜ್ಯದಲ್ಲಿ ಸಿದ್ದರಾಮಯ್ಯ ಮಂಡಿಸಿರುವ 2023-24ರ ಸಾಲಿನ ಬಜೆಟ್ನಿಂದ ಸಿಕ್ಕಿರುವುದು ಎರಡೇ, “ಸಾಲದ ಹೊರೆ – ತೆರಿಗೆಯ ಬರೆ” ಅವಾಸ್ತವಿಕ ಗ್ಯಾರಂಟಿಗಳ ಅನುಷ್ಠಾನದ ಹೆಸರಿನಲ್ಲಿ ಕರ್ನಾಟಕಕ್ಕೆ ಅನಿಯಮಿತ ಸಾಲದ ಹೊರೆ. ಗ್ಯಾರಂಟಿಗಳನ್ನು ನಂಬಿ ಮೋಸ ಹೋದ ಕನ್ನಡಿಗರಿಗೆ ತೆರಿಗೆಯ ಬರೆ ಎಂದು ಬಿಜೆಪಿ ಲೇವಡಿ ಮಾಡಿದೆ.

ಕಾಂಗ್ರೆಸ್ ಗ್ಯಾರಂಟಿಗಳಿಗೆ ಒದಗಿಸಬೇಕಾದ ಹಣಕಾಸಿನ ಗೊಂದಲ ಇನ್ನೂ ಮುಂದುವರೆದಿದೆ. ಶಿಕ್ಷಣ, ಆರೋಗ್ಯ, ಕೃಷಿ, ಕುಡಿಯುವ ನೀರು, ಗ್ರಾಮೀಣಾಭಿವೃದ್ಧಿ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಮೀಸಲಿರಿಸಲಾದ ಹಣಕಾಸಿನಲ್ಲಿ ನಮ್ಮ ಬಜೆಟ್ಗೆ ಹೋಲಿಸಿದರೆ ಕಡಿತವಾಗಿದೆ. ಇದೊಂದು ನಿರಾಶದಾಯಕ ಬಜೆಟ್, ಆಯವ್ಯಯ ಮಂಡನೆಯಲ್ಲೂ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡಿದೆ ಎಂದು  ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

https://twitter.com/BJP4Karnataka/status/1677257798852177922?ref_src=twsrc%5Egoogle%7Ctwcamp%5Eserp%7Ctwgr%5Etweet

https://twitter.com/BJP4Karnataka/status/1677268410789507072?ref_src=twsrc%5Egoogle%7Ctwcamp%5Eserp%7Ctwgr%5Etweet

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read