ಬೆಂಗಳೂರು : ಸೆಪ್ಟೆಂಬರ್ 1 ರಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ, ಬೃಹತ್ ಸಮಾವೇಶ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ,ವೈ ವಿಜಯೇಂದ್ರ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಸೆಪ್ಟೆಂಬರ್ 1 ರಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ, ಬೃಹತ್ ಸಮಾವೇಶ ನಡೆಸಲು ನಿರ್ಧರಿಸಲಿದ್ದೇವೆ. ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಬೇಕು. ಸಿದ್ದರಾಮಯ್ಯಗೆ ದೇವರ ಬಗ್ಗೆ ಎಷ್ಟು ಭಕ್ತಿ ಇದೆಯೋ ಗೊತ್ತಿಲ್ಲ. ಧರ್ಮಸ್ಥಳ ಬರೀ ದೇವಾಲಯ ಅಲ್ಲ, ಅದೊಂದು ಪುಣ್ಯ ಕ್ಷೇತ್ರ. ಅಣ್ಣಪ್ಪ ಸ್ವಾಮಿಗೆ ಕೋಟ್ಯಾಂತರ ರೂ ಭಕ್ತರು ಇದ್ದಾರೆ. ಸಿಎಂ ಸಿದ್ದರಾಮಯ್ಯ ಯಾರ ಮಾತು ಕೇಳಿ ಆತುರ ಬಿದ್ದರೋ ಗೊತ್ತಿಲ್ಲ, ಎಲ್ಲವೂ ಹೊರಗೆ ಬರಬೇಕು ಎಂದರು.
ಸೆಪ್ಟೆಂಬರ್ 1 ರಿಂದ ಬಿಜೆಪಿಯಿಂದ ಧರ್ಮಸ್ಥಳ ಚಲೋ ಆರಂಭವಾಗಲಿದೆ. ಬೃಹತ್ ಸಮಾವೇಶ ಕೂಡ ನಡೆಸಲು ನಿರ್ಧರಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ,ವೈ ವಿಜಯೇಂದ್ರ ಹೇಳಿದರು.
You Might Also Like
TAGGED:ಧರ್ಮಸ್ಥಳ ಚಲೋ