ಆ. 5ರಂದು ಬಿಜೆಪಿ ಚುನಾವಣೆ ಅಕ್ರಮದ ಬಗ್ಗೆ ದಾಖಲೆ ಸಹಿತ ಬಹಿರಂಗ: ರಾಹುಲ್ ಗಾಂಧಿ ‘ಮತಗಳ್ಳತನ ವಿರೋಧಿ ಜನ ಸಮಾವೇಶ’ಕ್ಕೆ ಸಕಲ ಸಿದ್ಧತೆ

ಬೆಂಗಳೂರು: “ಮತಕಳ್ಳತನದ ಆಘಾತಕಾರಿ ಅಪರಾಧ” ಕುರಿತಂತೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರಾದ ರಣದೀಪ್ ಸಿಂಗ್ ಸುರ್ಜೆವಾಲಾ, ಕೆ.ಸಿ. ವೇಣುಗೋಪಾಲ್ ಅವರು ಸಭೆ ನಡೆಸಿದ್ದಾರೆ.

ಆಗಸ್ಟ್ 5 ರಂದು ಫ್ರೀಡಂಪಾರ್ಕ್ ನಲ್ಲಿ ನಮ್ಮ ನಾಯಕರಾದ ರಾಹುಲ್ ಗಾಂಧಿ  ಅವರ ನೇತೃತ್ವದಲ್ಲಿ ನಡೆಯಲಿರುವ “ಮತಗಳ್ಳತನ ವಿರೋಧಿ ಜನ ಸಮಾವೇಶ”ದ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ದೇಶಾದ್ಯಂತ ದೊಡ್ಡಮಟ್ಟದಲ್ಲಿ ಜನಾಕ್ರೋಶವಿದ್ದರೂ ಚುನಾವಣಾ ಅಕ್ರಮದ ಮೂಲಕ ಹೇಗೆ ಅಧಿಕಾರದ ಗದ್ದುಗೆ ಏರಿದರು ಎಂಬುದನ್ನು ಈ ಸಮಾವೇಶದಲ್ಲಿ ರಾಹುಲ್ ಗಾಂಧಿ ಅವರು ದಾಖಲೆಗಳ ಸಮೇತ ಬಯಲುಗೊಳಿಸಲಿದ್ದಾರೆ.

ಪ್ರಜಾಪ್ರಭುತ್ವದ ಆಶಯವೇ ಬುಡಮೇಲಾಗಿರುವ ದುರಿತ ಕಾಲದಲ್ಲಿ ಸಂವಿಧಾನಪ್ರೇಮಿಗಳೆಲ್ಲರೂ ಪಕ್ಷಬೇಧ ಮರೆತು ಜೊತೆಗೂಡಬೇಕಿದೆ. ಪ್ರಜಾಪ್ರಭುತ್ವ ಉಳಿದರೆ ಸಂವಿಧಾನ, ಸಂವಿಧಾನ ಉಳಿದರೆ ಸ್ವಾತಂತ್ರ್ಯದ ಬದುಕು ಎನ್ನುವುದನ್ನು ನಾವ್ಯಾರು ಮರೆಯಬಾರದು ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read