BIG NEWS: ಮುಂದಿನ 100 ದಿನ ನಿರ್ಣಾಯಕ: ಬಿಜೆಪಿ 370 ಸ್ಥಾನ ಭದ್ರಪಡಿಸಿಕೊಳ್ಳಬೇಕು: ಪ್ರಧಾನಿ ಮೋದಿ

ನವದೆಹಲಿ: ‘ಬಿಜೆಪಿ 370 ಸ್ಥಾನಗಳನ್ನು ಭದ್ರಪಡಿಸಿಕೊಳ್ಳಬೇಕು, ಮುಂದಿನ 100 ದಿನಗಳು ನಿರ್ಣಾಯಕ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಭಾರತ ಮಂಟಪಂನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ), ಭಾರತೀಯ ಜನತಾ ಪಕ್ಷ ಮತ್ತು ಅದರ ಮಿತ್ರಪಕ್ಷಗಳು 400 ಸ್ಥಾನಗಳ ಗುರಿಯನ್ನು ಸಾಧಿಸಬೇಕಾದರೆ ಬಿಜೆಪಿ 370 ಸೀಟುಗಳ ಗಡಿ ದಾಟಬೇಕು ಎಂದು ಹೇಳಿದ್ದಾರೆ.

ಮುಂದಿನ 100 ದಿನಗಳು ನಿರ್ಣಾಯಕವಾಗಿವೆ. ಈ ದಿನಗಳಲ್ಲಿ ಪ್ರತಿ ಹೊಸ ಮತದಾರರು, ಪ್ರತಿ ಫಲಾನುಭವಿ, ಪ್ರತಿಯೊಂದು ಕ್ಷೇತ್ರ ಮತ್ತು ಪ್ರತಿಯೊಂದು ಸಮುದಾಯವನ್ನು ಒಗ್ಗೂಡಿಸುವುದು ಮತ್ತು ತೊಡಗಿಸಿಕೊಳ್ಳುವುದು ಮತ್ತು ಜನರ ವಿಶ್ವಾಸ ಗಳಿಸುವುದು ಕೇಸರಿ ಪಕ್ಷದ ಗುರಿಯಾಗಬೇಕು ಎಂದು ಅವರು ಪ್ರತಿಪಾದಿಸಿದರು.

ವಿರೋಧ ಪಕ್ಷದ ನಾಯಕರು ಕೂಡ ‘ಎನ್‌ಡಿಎ ಸರ್ಕಾರ್ 400 ಪಾರ್’ ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ. ಎನ್‌ಡಿಎ 400ಕ್ಕೆ ಕೊಂಡೊಯ್ಯಲು, ಬಿಜೆಪಿ 370(ಸೀಟು) ಮಾರ್ಕ್ ದಾಟಬೇಕಾಗುತ್ತದೆ ಎಂದು ಮೋದಿ ಹೇಳಿದ್ದಾರೆ.

ಮುಂದಿನ 100 ದಿನಗಳಲ್ಲಿ ಜನರ ವಿಶ್ವಾಸ ಗಳಿಸುವುದು ಅತ್ಯಗತ್ಯ. ಸಾಮೂಹಿಕ ಪ್ರಯತ್ನದಿಂದ ಬಿಜೆಪಿಯು ಮತ್ತೆ ಅತ್ಯುನ್ನತ ಜನಾದೇಶದೊಂದಿಗೆ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದ್ದಾರೆ.

https://twitter.com/ANI/status/1759139282457899406

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read