ಸಚಿವ K.N ರಾಜಣ್ಣಗೆ ಬಫೂನ್‌ ಎಂದ ಬಿಜೆಪಿ ಸಂಸದ ಮುನಿಸ್ವಾಮಿ

ಬೆಂಗಳೂರು : ಬಿ.ವೈ.ವಿಜಯೇಂದ್ರ ಇನ್ನೂ ಚೈಲ್ಡ್ ಎಂಬ ಸಹಕಾರ ಸಚಿವ ರಾಜಣ್ಣ ಹೇಳಿಕೆಗೆ ಬಿಜೆಪಿ ಸಂಸದ ಮುನಿಸ್ವಾಮಿ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು ರಾಜಣ್ಣ ಬಫೂನ್, ಅವರಿಗೆ ಊರು ಹೋಗು ಎನ್ನುತ್ತಿದೆ, ಕಾಡು ಬಾ ಎನ್ನುತ್ತಿದೆ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಅವರು ಏನಾದರು ಹೇಳಿ ಕೊಟ್ಟರೆ ಪರಮೇಶ್ವರ್ ಸಿಎಂ ಮಾಡಿ ಎನ್ನುತ್ತಾರೆ. ಇಲ್ಲವಾದರೆ ಶ್ಯಾಮನೂರು ಶಿವ ಶಂಕರಪ್ಪ ಪರವಾಗಿ ಮಾತನಾಡುತ್ತಾರೆ. ವಿಜಯೇಂದ್ರ ಯsಳಸು ಅನ್ನೋ ರಾಜಣ್ಣಗೆ ಜಾಸ್ತಿ ವಯಸ್ಸಾಗಿದೆ. ಕಾಂಗ್ರೆಸ್ನ ಎಷ್ಟೋ ಜನ ಶಾಸಕರು ಬಿಜೆಪಿ ಜೊತೆಗೆ ಬರಲು ಸಿದ್ದರಿದ್ದಾರೆ. ಕುರುಡುಮಲೆ ವಿನಾಯಕನ ಅನುಗ್ರಹದಿಂದ ಕಾಂಗ್ರೆಸ್ ಸರ್ಕಾರ ಆದಷ್ಟು ಬೇಗ ಪತನವಾಗಲಿದೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read