BIG NEWS: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಸೈಕಲ್ ಸವಾರಿಯಲ್ಲಿ ಬಂದ ಬಿಜೆಪಿ ಶಾಸಕ ಸುರೇಶ್ ಕುಮಾರ್

ಧರ್ಮಸ್ಥಳ: ಬಿಜೆಪಿ ಶಾಸಕ ಸುರೇಶ್ ಕುಮಾರ್ ರಾಜಧಾನಿ ಬೆಂಗಳೂರಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೈಕಲ್ ನಲ್ಲಿ ತಲುಪಿದ್ದಾರೆ. ಶಾಸಕರ ಸೈಕಲ್ ಸವಾರಿಗೆ ರಾಜಾಜಿನಗರ ಪೆಡಲ್ ಪವರ್ ತಂಡ ಸಾಥ್ ನೀಡಿದೆ.

2014ರ ನವೆಂಬರ್ ನಲ್ಲಿಯೂ ಸುರೇಶ್ ಕುಮಾರ್ ಹಾಗೂ ಗೆಳೆಯರು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡಿ 8 ದಿನಗಳಲ್ಲಿ ಕ್ರಮಿಸಿದ್ದರು. ಈಗ ಮತ್ತೊಮ್ಮೆ ಶಾಸಕರು ಹಾಗೂ ಸ್ನೇಹಿತರು ಧರ್ಮಸ್ಥಳಕ್ಕೆ ಸೈಕಲ್ ಸವಾರಿ ಹೊರಟಿರುವುದು ವಿಶೇಷ.

ಈ ಬಗ್ಗೆ ಸ್ವತಃ ಶಾಸಕ ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡಿದ್ದಾರೆ. 2014 ನವೆಂಬರ್ ನಲ್ಲಿ ಕೆಲವು ಗೆಳೆಯರೊಂದಿಗೆ ನಾನು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡಿದ್ದೆ. ದೂರವನ್ನು ಎಂಟು ದಿನಗಳಲ್ಲಿ ನಾವು ಕ್ರಮಿಸಿದ್ದೆವು. ಇಂದು ಮತ್ತೊಮ್ಮೆ ಧರ್ಮಸ್ಥಳಕ್ಕೆ ಯಾತ್ರೆ ಬಂದಿದ್ದೇವೆ.

The rajajinagara Pedal Power ತಂಡದ 9 ಸೈಕಲ್ ಸವಾರರು ಬುಧವಾರ ಬೆಳಿಗ್ಗೆ ಬೆಂಗಳೂರು ಬಿಟ್ಟು ಇದೀಗ ಧರ್ಮಸ್ಥಳ ಸೇರಿದೆವು. ವಿಶೇಷವಾಗಿ ಶಿರಾಡಿ ಘಾಟ್ ನಲ್ಲಿ ನಮ್ಮ ಪ್ರಯಾಣ ಮರೆಯಲಾರದಂತಹದ್ದು.

ತಂಡದ ಸದಸ್ಯರು ಅಯ್ಯಪ್ಪ, ಸಾಗರ್ ನಾಯ್ಡು, ಹರೀಶ್, ರಾಘವ್, ದಿವಾಕರ್, ಮೋಹನ್, ಬಾಲು, ಕಿರಣ್ ಎಲರಿಗೂ ಅಭಿನಂದನೆಗಳು ಎಂದು ತಿಳಿಸಿದ್ದಾರೆ. ಅಲ್ಲದೇ ಪ್ರಯಾಣಕ್ಕೆ ಸಹಕಾರ ನೀಡಿದವರಿಗೆ ವಿಶೇಷ ಧನ್ಯವಾದ ಕುಣಿಗಲ್, ಹಿರಿಸಾವೆ, ಸಕಲೇಶಪುರದಲ್ಲಿ ನೀಡಿದ ಆತಿಥ್ಯಕ್ಕೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read