ಮಕ್ಕಳ ಜೊತೆ ಪಿಯುಸಿ ಪರೀಕ್ಷೆ ಬರೆದ ಮಾಜಿ ಶಾಸಕ……!

ಬರೇಲಿ: ಉತ್ತರ ಪ್ರದೇಶದ ಬರೇಲಿಯಲ್ಲಿನ 12 ನೇ ತರಗತಿ ಬೋರ್ಡ್ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಬಂದಿದ್ದ ಬಿಜೆಪಿಯ ಮಾಜಿ ಶಾಸಕ ರಾಜೇಶ್ ಮಿಶ್ರಾ ಅಲಿಯಾಸ್ ಪಪ್ಪು ಭರ್ತೌಲ್ ಅವರನ್ನು ನೋಡಿ ಎಲ್ಲರೂ ದಂಗಾಗಿರುವ ಘಟನೆ ನಡೆದಿದೆ.

51 ವರ್ಷದ ರಾಜೇಶ್ ಮಿಶ್ರಾ 2017 ರ ವಿಧಾನಸಭಾ ಚುನಾವಣೆಯಲ್ಲಿ ಬರೇಲಿಯ ಬಿಥ್ರಿ ಚೈನ್‌ಪುರ ಕ್ಷೇತ್ರದಿಂದ ಗೆದ್ದಿದ್ದರು.

2022 ರಲ್ಲಿ ನಡೆದ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಅದರ ಬಳಿಕವೂ ಅವರು ರಾಜಕೀಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಈಗ 12ನೇ ತರಗತಿ ಬೋರ್ಡ್​ ಪರೀಕ್ಷೆ ಬರೆದಿದ್ದಾರೆ.

ಈ ಪರೀಕ್ಷೆ ಬರೆಯಬೇಕು ಎಂಬ ಆಲೋಚನೆ ನನ್ನಲ್ಲಿ ಉಂಟಾಗಿತ್ತು. ಹೆಚ್ಚು ಓದಿದಷ್ಟೂ ನನ್ನ ಕ್ಷೇತ್ರದ ಯುವ ಜನತೆಯ ಜತೆ ಉತ್ತಮ ಸಂಪರ್ಕ ಸಾಧ್ಯ ಎಂದು ಅವರು ಹೇಳಿದ್ದಾರೆ.

ಆರ್ಥಿಕವಾಗಿ ದುರ್ಬಲರಾಗಿರುವವರು ಉತ್ತಮ ವಕೀಲರನ್ನು ಪಡೆದುಕೊಳ್ಳಲು ಸಾಧ್ಯವಾಗದ ಕಾರಣ ಕಾನೂನು ಹೋರಾಟದಲ್ಲಿ ನ್ಯಾಯ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂಥವರಿಗೆ ಸಹಾಯ ಮಾಡಲು ನಾನು ಕಾನೂನು ಅಧ್ಯಯನ ಮಾಡಲು ಬಯಸಿದ್ದೇನೆ. ಹಾಗೆ ಮಾಡಲು 12ನೇ ತರಗತಿ ಬೋರ್ಡ್ ಪರೀಕ್ಷೆ ಉತ್ತೀರ್ಣನಾಗುವುದು ಅಗತ್ಯ ಎಂದು ಮಿಶ್ರಾ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read