ಹಾಲಿ ಸಂಸದೆಗೆ ಟಿಕೆಟ್ ನಿರಾಕರಿಸಿದ ಬಿಜೆಪಿ: ಉಜ್ವಲ್ ನಿಕಮ್ ಗೆ ಟಿಕೆಟ್

ಮುಂಬೈ: ಲೋಕಸಭೆ ಚುನಾವಣೆಗೆ ಮುಂಬೈ ನಾರ್ತ್ ಸೆಂಟ್ರಲ್ ನಿಂದ 26/11 ಪ್ರಕರಣದ ವಿರುದ್ಧ ಹೋರಾಡಿದ ಉಜ್ವಲ್ ನಿಕಮ್ ಅವರನ್ನು ಬಿಜೆಪಿ ಕಣಕ್ಕಿಳಿಸಿದ್ದು, ಪೂನಂ ಮಹಾಜನ್ ಅವರನ್ನು ಕೈಬಿಟ್ಟಿದೆ.

ಶನಿವಾರ ಲೋಕಸಭೆ ಚುನಾವಣೆಗೆ ತನ್ನ 15 ನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಮುಂಬೈ ಉತ್ತರ ಸೆಂಟ್ರಲ್ ಕ್ಷೇತ್ರದಿಂದ ಪ್ರಮುಖ ಕಾನೂನು ವಿದ್ವಾಂಸ ಉಜ್ವಲ್ ನಿಕಮ್ ಅವರನ್ನು ಕಣಕ್ಕಿಳಿಸಿದೆ, ಹಾಲಿ ಸಂಸದೆ ಪೂನಂ ಮಹಾಜನ್ ಅವರನ್ನು ಕೈಬಿಟ್ಟಿದೆ. ವಕೀಲ ಉಜ್ವಲ್ ನಿಕಮ್ ಅವರು 26/11 ಮುಂಬೈ ಭಯೋತ್ಪಾದನಾ ದಾಳಿ ಮತ್ತು ಅನೇಕ ಪ್ರಮುಖ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದಾರೆ.

ಅವರು 1993 ರ ಮುಂಬೈ ಸ್ಫೋಟ ಪ್ರಕರಣ, 2008 ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿ ಸೇರಿದಂತೆ ಹಲವಾರು ಪ್ರಮುಖ ಮತ್ತು ಉನ್ನತ ಮಟ್ಟದ ಪ್ರಕರಣಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ಅವರು ರಾಜ್ಯ ಸರ್ಕಾರದ ಪರವಾಗಿ ಯಶಸ್ವಿಯಾಗಿ ವಾದಿಸಿದ್ದರು. ಭಯೋತ್ಪಾದಕರಿಗೆ ಮರಣದಂಡನೆ ಶಿಕ್ಷೆ ಕೊಡಿಸಿದ್ದರು. ಮುಂಬೈ ಭಯೋತ್ಪಾದಕ ದಾಳಿಯ ಅಜ್ಮಲ್ ಕಸಬ್ ಮತ್ತು 1993 ರ ಮುಂಬೈ ಸರಣಿ ಸ್ಫೋಟದ ಭಯೋತ್ಪಾದಕರಿಗೆ ಮರಣದಂಡನೆಯನ್ನು ಖಾತರಿಪಡಿಸುವಲ್ಲಿ ನಿಕಮ್ ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಪ್ರಮೋದ್ ಮಹಾಜನ್ ಹತ್ಯೆ ಪ್ರಕರಣದಲ್ಲೂ ಅವರು ವಾದ ಮಂಡಿಸಿದ್ದರು.

2014 ರಲ್ಲಿ ಪೂನಂ ಮಹಾಜನ್ ಮುಂಬೈ ನಾರ್ತ್ ಸೆಂಟ್ರಲ್ ಕ್ಷೇತ್ರದಿಂದ ಗೆಲುವು ಸಾಧಿಸಿದರು, ದಿವಂಗತ ನಟ ಮತ್ತು ಕಾಂಗ್ರೆಸ್ ನಾಯಕ ಸುನಿಲ್ ದತ್ ಅವರ ಪುತ್ರಿ ಪ್ರಸ್ತುತ ಸಂಸದೆ ಪ್ರಿಯಾ ದತ್ ಅವರನ್ನು ಸೋಲಿಸಿದರು. 2019 ರಲ್ಲೂ ಜಯಗಳಿಸಿದ್ದರು.

https://twitter.com/ANI/status/1784188364670779427

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read