BREAKING : ಬಿಜೆಪಿ ನಿಯೋಗದ ‘KRS’ ಅಣೆಕಟ್ಟು ಭೇಟಿ ಮುಂದಿನ ವಾರಕ್ಕೆ ಮುಂದೂಡಿಕೆ

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ವಿಚಾರ ರಾಜ್ಯದಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ.

ಈ ಹಿನ್ನೆಲೆ ನಾಳೆ ಬಿಜೆಪಿ ನಿಯೋಗ KRS ಅಣೆಕಟ್ಟು ಭೇಟಿ ನೀಡಲು ಮುಂದಾಗಿದ್ದು, ಆದರೆ ಇದೀಗ ನಾಳೆಯ ಬದಲು ಮುಂದಿನ ವಾರ KRS ಅಣೆಕಟ್ಟು ಭೇಟಿಗೆ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಬಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂದಿನ ವಾರಕ್ಕೆ ಮುಂದೂಡಿಕೆ ಮಾಡಲಾಗಿದೆ. ಈ ಹಿಂದೆ ಪ್ರತಿಭಟನೆಯನ್ನು ಕೂಡಾ ಎರಡು ಬಾರಿ ಮುಂದೂಡಿದ್ದ ಬಿಜೆಪಿ ಇದೀಗ KRS ಅಣೆಕಟ್ಟು ಭೇಟಿಯನ್ನು ಕೂಡ ಮುಂದೂಡಿದೆ.ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸೆಪ್ಟೆಂಬರ್ 12 ರ ನಂತರ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸುಪ್ರೀಂ ಕೋರ್ಟ್ಗೆ ನೀಡಿದ ಅಫಿಡವಿಟ್ನಲ್ಲಿ ತಿಳಿಸಿದೆ. ಸುಪ್ರೀಂಕೋರ್ಟ್ ನಲ್ಲಿ ಸೆ.21  ರಂದು ವಿಚಾರಣೆ ನಡೆಯಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read