BIG NEWS: ಮೊದಲು ಫ್ರೀ, ಆಮೇಲೆ ಕಂಡೀಷನ್‌: ವಿರೋಧ ಬಂದರೆ ಯೂ ಟರ್ನ್! ಬಿಪಿಎಲ್ ಕಾರ್ಡ್ ಪರಿಷ್ಕರಣೆ ವಿಚಾರಕ್ಕೆ ಬಿಜೆಪಿ ಕಿಡಿ

ಬೆಂಗಳೂರು: ಮೊದಲು ಫ್ರೀ, ಆಮೇಲೆ ಕಂಡೀಷನ್‌, ನಂತರ ಬ್ಯಾನ್‌, ಬಳಿಕ ವಿರೋಧ ಬಂದರೆ ಯೂ ಟರ್ನ್! ರಾಜ್ಯ ಸರ್ಕಾರದ ಕ್ರಮಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಅವೈಜ್ಞಾನಿಕ ಗ್ಯಾರಂಟಿ ಯೋಜನೆಗೆ ಹಣಕಾಸು ಸರಿದೂಗಿಸಲು ರಾಜ್ಯದಲ್ಲಿ 11 ಲಕ್ಷ ಬಡವರ ಬಿಪಿಎಲ್‌ ಕಾರ್ಡ್ ರದ್ದು ಮಾಡಿ, ಬಡವರ ಅನ್ನ ಕಿತ್ತುಕೊಂಡ ಕಾಂಗ್ರೆಸ್ ಸರ್ಕಾರ ಇದೀಗ ಬಿಜೆಪಿಯ ಪ್ರತಿಭಟನೆ ಮತ್ತು ಜನಾಕ್ರೋಶಕ್ಕೆ ಮಣಿದು ಷರತ್ತುಗಳ ಮೂಲಕ ಯೂಟರ್ನ್‌ ಹೊಡೆದಿದೆ ಎಂದು ಕಿಡಿಕಾರಿದೆ.

ಸಣ್ಣಪುಟ್ಟ ಸಾಲಗಳಿಗೂ ಬ್ಯಾಂಕ್‌ಗಳಲ್ಲಿ ಬಡವರು ಐಟಿ ರಿಟರ್ನ್ಸ್‌ ಮಾಡಿರುತ್ತಾರೆ. ಇಂತವರ ಅನ್ನವನ್ನು ಸರ್ಕಾರ ಕಿತ್ತುಕೊಳ್ಳುವುದು ಎಷ್ಟು ಸಮಂಜಸ? ರೇಷನ್‌ ಕಾರ್ಡ್‌ ಅಕ್ಕಿಯನ್ನೇ ನಂಬಿಕೊಂಡು ಬದುಕುವ ಬಡ ಕುಟುಂಬಗಳಿಗೆ ತುಘಲಕ್ ಸಿದ್ದರಾಮಯ್ಯ ಸರ್ಕಾರದ ನಿರ್ಧಾರವು ಶಾಪವಾಗಿದೆ. ತುತ್ತು ಅನ್ನಕ್ಕೂ ಇದರಿಂದಾಗಿ ಕಷ್ಟ ಪಡಬೇಕಿದೆ.
ಬಡವರ ಶಾಪ ಪಾಪಿ ಕಾಂಗ್ರೆಸ್ ಗೆ ತಟ್ಟದೆ ಇರಲಾರದು ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read