ಬಿಜೆಪಿ-ಕಾಂಗ್ರೆಸ್ ರಾಜಕಾರಣಿಗಳನ್ನು ಅನಿರ್ದಿಷ್ಟವಾಗಿ ಜೈಲಿಗೆ ಹಾಕಬೇಕು : ನಟ ಚೇತನ್ ಅಹಿಂಸಾ

ಬೆಂಗಳೂರು : ನಿರುಪದ್ರವ ಉಲ್ಲೇಖಗಳು ಜೈಲು ಶಿಕ್ಷೆಗೆ ಅರ್ಹವಾಗಿದ್ದರೆ, ಬಿಜೆಪಿ-ಕಾಂಗ್ರೆಸ್ ರಾಜಕಾರಣಿಗಳನ್ನು ಅನಿರ್ದಿಷ್ಟವಾಗಿ ಜೈಲಿಗೆ ಹಾಕಬೇಕು ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.

ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರಿಗೆ ಜೈಲು ಶಿಕ್ಷೆ ವಿಧಿಸಿದ ಕುರಿತು ಪ್ರತಿಕ್ರಿಯೆ ನೀಡಿದ ನಟ ಚೇತನ್ ಅಹಿಂಸಾ 23 ವರ್ಷಗಳಷ್ಟು ಹಳೆಯ ಮಾನನಷ್ಟ ಮೊಕದ್ದಮೆಯಲ್ಲಿ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರಿಗೆ ದೆಹಲಿ ನ್ಯಾಯಾಲಯವು 5 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

2000 ಇಸವಿಯಲ್ಲಿನ ಪತ್ರಿಕಾಗೋಷ್ಠಿಯಲ್ಲಿ, ಪಾಟ್ಕರ್ ಅವರು ದೆಹಲಿಯ ಲೆಫ್ಟಿನೆಂಟ್-ಗವರ್ನರ್ ಅವರನ್ನು ‘ಹೇಡಿತನದವನು’ ಮತ್ತು ‘ದೇಶಭಕ್ತನಲ್ಲ’ ಎಂದು ಹೇಳಿದ್ದರು.ಅಂತಹ ನಿರುಪದ್ರವ ಉಲ್ಲೇಖಗಳು ಜೈಲು ಶಿಕ್ಷೆಗೆ ಅರ್ಹವಾಗಿದ್ದರೆ, ಬಿಜಿಪಿ-ಕಾಂಗ್ರೆಸ್ ರಾಜಕಾರಣಿಗಳನ್ನು ಅನಿರ್ದಿಷ್ಟವಾಗಿ ಜೈಲಿಗೆ ಹಾಕಬೇಕು ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read