ಬೆಂಗಳೂರು : ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಮತ್ತೆ ಅಕ್ರಮ ಮರಳು ಮಾಫಿಯಾಗೆ ಜೀವ ಬಂದಿದೆ ಎಂದು ಬಿಜೆಪಿ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಮತ್ತೆ ಅಕ್ರಮ ಮರಳು ಮಾಫಿಯಾಗೆ ಜೀವ ಬಂದಿದೆ. ಏಟಿಎಂ ಸರ್ಕಾರ ತನ್ನ ಖಜಾನೆ ತುಂಬಿಸಿಕೊಳ್ಳಲು ಅಡ್ಡದಾರಿಗಳಿಗೆ ಕುಮ್ಮಕ್ಕು ನೀಡಿ, ಅಮಾಯಕ ಜೀವಗಳನ್ನು ಬಲಿ ಪಡೆಯುತ್ತಿದೆ. ಪ್ರತಿ ದಿನ ಸುದ್ದಿಗೋಷ್ಠಿ ಮಾಡಿ ಅಮಾಯಕರಿಗೆ ಬೆದರಿಕೆ ಹಾಕುತ್ತಿದ್ದ ಪೇಪರ್ ಟೈಗರ್ ಪ್ರಿಯಾಂಕ್ ಖರ್ಗೆ ತಮ್ಮದೇ ಉಸ್ತುವಾರಿಯಲ್ಲಿರುವ ತವರು ಜಿಲ್ಲೆಯ ಈ ಪ್ರಕರಣಕ್ಕೆ ನ್ಯಾಯ ಒದಗಿಸುವ ಮೂಲಕ ತಮ್ಮ ಶೂರತ್ವವನ್ನು ತೋರಿಸಬೇಕಿದೆ ಎಂದು ಬಿಜೆಪಿ ಕಿಡಿಕಾರಿದೆ.
ವೀರಶೈವ-ಲಿಂಗಾಯತ ನಾಯಕರಿಗಷ್ಟೇ ಅಲ್ಲ, ಪೂರ್ಣ ಸಮುದಾಯಕ್ಕೇ ವಂಚಿಸುವುದು ಈ ಲಿಂಗಾಯತ ವಿರೋಧಿ ಏಟಿಎಂ ಸರ್ಕಾರದ ಸಿದ್ಧ ಸೂತ್ರ. ಈಗ ಲಿಂಗಾಯತ ಅಭಿವೃದ್ಧಿ ನಿಗಮಕ್ಕೇ ಅಡ್ಡಗಾಲು ಹಾಕುವ ಆಲೋಚನೆಯಲ್ಲಿ ಸಿದ್ದರಾಮಯ್ಯರವರ ಸರ್ಕಾರವಿದೆ. ಬೇಸತ್ತು ಹೋಗುವಷ್ಟು ಕಂಡೀಷನ್ಗಳಿರುವ ಗ್ಯಾರಂಟಿಗಳನ್ನೇ ಬೇಕಿದ್ದರೆ ವೀರಶೈವ-ಲಿಂಗಾಯತರೂ ಪಡೆಯಲಿ ಎಂಬ ಧೋರಣೆಯ ಈ ಸರ್ಕಾರದ ನಡೆ ಅಕ್ಷಮ್ಯ ಎಂದು ಬಿಜೆಪಿ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ.
https://twitter.com/BJP4Karnataka/status/1669937996009816064?ref_src=twsrc%5Egoogle%7Ctwcamp%5Eserp%7Ctwgr%5Etweet
https://twitter.com/BJP4Karnataka/status/1669948602494640128?ref_src=twsrc%5Egoogle%7Ctwcamp%5Eserp%7Ctwgr%5Etweet