ಯುಎಫ್ಓ ಪರಿಣಿತರೊಬ್ಬರು ಮೆಕ್ಸಿಕನ್ ಕಾಂಗ್ರೆಸ್ನಲ್ಲಿ ಮೂರು ಬೆರಳುಗಳು ಕೈ ಹಾಗೂ ಪಾದಗಳನ್ನು ಹೊಂದಿರುವ ವಿಚಿತ್ರವಾದ ಶವದ ಫೋಟೋವನ್ನ ಬಹಿರಂಗಪಡಿಸಿದ್ದಾರೆ. ಈ ಒಂದು ವಿಶೇಷ ಕಾರ್ಯಾಚರಣೆಯ ಮುಂದಾಳತ್ವ ವಹಿಸಿದ್ದ ಜೈಮ್ ಮೌಸ್ಸನ್, ಈ ವಿಚಿತ್ರ ಕಾಯ ಬಹಿರಂಗಪಡಿಸಿದ್ದಾರೆ.
ಪೆರುವಿನ ಕುಸ್ಕೋದಲ್ಲಿನ ಗಣಿಯಿಂದ ತೆಗೆದ ಈ ಮಮ್ಮಿಯು ಶೇಕಡಾ 30ರಷ್ಟು ಮನುಷ್ಯನ ಹೋಲಿಕೆ ಹೊಂದಿದೆ ಎನ್ನಲಾಗಿದೆ.
ಫೋಟೋದಲ್ಲಿ ತೋರಿಸಲಾದ ದೇಹಗಳು ಸರಿಸುಮಾರು ಮನುಷ್ಯನ ಆಕಾರದಲ್ಲಿಯೇ ಇದೆ. ಉದ್ದನೆಯ ತಲೆಬುರುಡೆ ಇರುವ ಈ ವಿಚಿತ್ರ ಏಲಿಯನ್ ಒಂದು ರೀತಿ ಹಕ್ಕಿಯಂತೆಯೂ ಕಾಣುತ್ತೆ ಅಂತಾ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೇ ಇವುಗಳಿಗೆ ಯಾವುದೇ ಹಲ್ಲಿಲ್ಲ ಎನ್ನಲಾಗಿದೆ.
ಇವುಗಳು ನಮ್ಮ ಭೂಮಿಯ ವಿಕಾಸದ ಭಾಗವಲ್ಲ. ಇವುಗಳು ಯುಎಫ್ಓ ಅವಶೇಷದ ಬಳಿಕ ಕಂಡು ಬಂದ ಜೀವಿಗಳೂ ಸಹ ಅಲ್ಲ. ಇವುಗಳೆಲ್ಲ ಡಯಾಟಮ್ ಗಣಿಗಳಲ್ಲಿ ಕಂಡು ಬಂದಿವೆ ಎಂದು ಯುಎಫ್ಓ ತಜ್ಞ ಹೇಳಿದ್ದಾರೆ.
https://twitter.com/i/status/1701788047669682340