ಮನುಷ್ಯರಿಗೆ ಕಚ್ಚೋದು, ಹಸಿಮಾಂಸ ತಿನ್ನೋದು : ನಾಯಿ ಕಚ್ಚಿದ ಮೇಲೆ ವಿಚಿತ್ರವಾಗಿ ಆಡ್ತಿದ್ದಾನೆ ಈ ವ್ಯಕ್ತಿ….!

ಮಧ್ಯಪ್ರದೇಶದ ಸಾಗರ್‌ನಲ್ಲಿ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.  ಸೋನು ಎಂದು ಗುರುತಿಸಲಾದ ಯುವಕನೊಬ್ಬ ನಾಯಿ ಕಚ್ಚಿದ ನಂತರ ವಿಚಿತ್ರವಾಗಿ ವರ್ತಿಸಲು ಶುರು ಮಾಡಿದ್ದಾನೆ. ವರದಿಗಳ ಪ್ರಕಾರ, ನಾಯಿಯಿಂದ ಕಚ್ಚಿಸಿಕೊಂಡಿರುವ ಸೋನು, ಈ ಪ್ರದೇಶದಲ್ಲಿ ಹಲವರಿಗೆ  ಕಚ್ಚಿದ್ದಾನೆ. ಇದು ನಿವಾಸಿಗಳು ಮತ್ತು ವ್ಯಾಪಾರಿಗಳಲ್ಲಿ ಭಯ ಹುಟ್ಟಿಸಿದೆ.

ಸುಮಾರು 10 ರಿಂದ 12 ದಿನಗಳ ಹಿಂದೆ ಸ್ಥಳೀಯ ತರಕಾರಿ ಮಾರುಕಟ್ಟೆಯಲ್ಲಿ ಕಸ ಗುಡಿಸುವಾಗ ಸೋನು ಎಂಬಾತನಿಗೆ ನಾಯಿ ಕಚ್ಚಿತ್ತು. ಅಂದಿನಿಂದ ಅವನ ವರ್ತನೆ ಬದಲಾಗಿದೆ. ದಾರಿಹೋಕರಿಗೆ ಕಚ್ಚುವುದಲ್ಲದೆ, ಹಸಿ ಮಾಂಸವನ್ನು ಸೇವಿಸಲು ಶುರು ಮಾಡಿದ್ದಾನೆ. ಮಾರುಕಟ್ಟೆಯಲ್ಲಿನ ವ್ಯಾಪಾರಿಗಳು ವೈದ್ಯಕೀಯ ಚಿಕಿತ್ಸೆ ಮತ್ತು ರೇಬಿಸ್ ಲಸಿಕೆಗಳನ್ನು ಸೋನುಗೆ ನೀಡಿದ್ದು, ಆದ್ರೂ ಪ್ರಯೋಜನವಾಗಿಲ್ಲ.

ಸೋನುವಿನಿಂದ ಕಚ್ಚಿಸಿಕೊಂಡ ಸ್ಥಳೀಯರು ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ. ಅವರು ಚುಚ್ಚುಮದ್ದು ಪಡೆದು, ಚಿಕಿತ್ಸೆಗೆ ಒಳಗಾಗಿದ್ದಾರೆ. ವೈದ್ಯರ ಪ್ರಕಾರ, ರೇಬೀಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ.  ಸೋನುಗೆ ನಾಯಿ  ಕಚ್ಚಿ 10 ರಿಂದ 12 ದಿನಗಳು ಕಳೆದಿದ್ದರೆ, ರೇಬೀಸ್ ಹೆಚ್ಚು ತೀವ್ರವಾದ ರೂಪದಲ್ಲಿ ಪ್ರಕಟವಾಗುತ್ತದೆ. ಇದು ಸಾವಿಗೆ ಕಾರಣವಾಗಬಹುದು. ಸೋನು ಅವರ ಪ್ರಸ್ತುತ ನಡವಳಿಕೆಯು ರೇಬೀಸ್‌ಗಿಂತ ಹೆಚ್ಚಾಗಿ ಆಲ್ಕೊಹಾಲ್ ಸೇವನೆಯಿಂದ ಉಲ್ಬಣಗೊಂಡ ಮಾನಸಿಕ ಅಸ್ವಸ್ಥತೆ ಎಂದು ವೈದ್ಯರು ಹೇಳಿದ್ದಾರೆ.  ಸಾರ್ವಜನಿಕರು ಸೋನುನಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವಂತೆ ಡಾ ರಾವತ್ ಶಿಫಾರಸು ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read