BIG NEWS: ಬಿಟ್ ಕಾಯಿನ್ ಹಗರಣ: ನಟೋರಿಯಸ್ ಹ್ಯಾಕರ್ ಅರೆಸ್ಟ್

ಬೆಂಗಳೂರು: ರಾಜ್ಯಾದ್ಯಂತ ಭಾರಿ ಸುದ್ದಿ ಮಾಡಿದ್ದ ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಇಂಟರ್ ನ್ಯಾಷನಲ್ ಹ್ಯಾಕರ್ ನನ್ನು ಬಂಧಿಸುವಲ್ಲಿ ಎಸ್ ಐಟಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಬಿಟ್ ಕಾಯಿನ್ ಹಗರಣದ ಕಿಂಗ್ ಪಿನ್ ಎನ್ನಲಾದ ಶ್ರೀಕಿಗೂ ಮೊದಲೇ ಹ್ಯಾಕಿಂಗ್ ನಲ್ಲಿ ಪರಿಣತನಾಗಿದ್ದ ನಟೋರಿಯಸ್ ಪಂಜಾಬ್ ಮೂಲದ ರಾಜೇಂದ್ರ ಸಿಂಗ್ ನನ್ನು ಎಸ್ ಐ ಟಿ ಅಧಿಕಾರಿಗಳು ಬಂಧಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಭೂಗತನಾಗಿದ್ದ ಈತನನ್ನು ಕೇಂದ್ರ ತನಿಖಾ ತಂಡಗಳು ಹುಡುಕಾಟ ನಡೆಸಿದ್ದವು. ರಾಜೇಂದ್ರ ಸಿಂಗ್ ಸರ್ಕಾರಿ ಹಾಗೂ ಖಾಸಗಿ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡುತ್ತಿದ್ದ. ಸಧ್ಯ ರಾಜೇಂದ್ರ ಸಿಂಗ್ ನನ್ನು ಸಿಐಡಿ ಎಡಿಜಿಪಿ ಮನೀಶ್ ಖರ್ಬೀಕರ್ ನೇತೃತ್ವದ ತಂದ ಬಂಧಿಸಿದೆ. ಈತನ ಬಂಧನದಿಂದಾಗಿ ಬಿಟ್ ಕಾಯಿನ್ ಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗಳು ಹೊರಬರಲಿವೆ.

ಈಗಾಗಲೇ ಬಂಧಿಸಲ್ಪಟ್ಟಿರುವ ಶ್ರೀಕಿಯಿಂದ ಬರೋಬ್ಬರಿ 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ವಶಕ್ಕೆ ಪಡೆಯಲಾಗಿದೆ. ಶ್ರೀಕಿ ವಿಚಾರಣೆ ವೇಳೆ ಪಂಜಾಬ್ ಮೂಲದ ರಾಜೇಂದ್ರ ಸಿಂಗ್ ಬಗ್ಗೆ ಮಾಹಿತಿ ಹೊರಬಂದಿತ್ತು. ಇದೀಗ ರಾಜೇಂದ್ರ ಸಿಂಗ್ ನನ್ನು ಪಂಜಾಬ್ ನಲ್ಲಿ ಬಂಧಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read