ಬಿಹಾರದ ಪಾಟ್ನಾ ಮೂಲದ ಬೈಕ್ ಸವಾರನೊಬ್ಬ ಚಲಿಸುತ್ತಿರುವ ಬೈಕ್ ಮೇಲೆ ನಿಂತುಕೊಂಡು ಸ್ಟಂಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಬೈಕ್ ನಲ್ಲಿ ಹಿಂಬದಿ ಸವಾರ ಕೂತಿದ್ದು ಬೈಕ್ ಚಾಲನೆ ಮಾಡ್ತಿದ್ದ ಯುವಕ ಅಜಾಗರೂಕತೆಯಿಂದ ಸೀಟ್ ಮೇಲೆ ನಿಂತು ಕೈ ಚಾಚಿ ರಸ್ತೆಯಲ್ಲಿ ಸ್ಟಂಟ್ ಮಾಡುತ್ತಿದ್ದಾಗ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡು ವೈರಲ್ ಆಗಿದ್ದು, ರಾಜ್ಯ ಪೊಲೀಸರ ಗಮನ ಸೆಳೆದಿದೆ. ಪ್ರಕರಣವನ್ನು ಪರಿಶೀಲಿಸುವಂತೆ ಪಾಟ್ನಾ ವಿಭಾಗದ ಅಧಿಕಾರಿಗಳಿಗೆ ಆದೇಶಿಸಲಾಗಿದೆ.
ರಸ್ತೆಯಲ್ಲಿ ಮತ್ತೊಬ್ಬ ಪ್ರಯಾಣಿಕರು ಚಿತ್ರೀಕರಿಸಿದ ವೀಡಿಯೊದಲ್ಲಿ, ಬೈಕ್ ಸವಾರನೊಬ್ಬ ಅಪಾಯಕಾರಿ ಸಾಹಸದಲ್ಲಿ ತೊಡಗಿರುವುದು ಕಂಡುಬಂದಿದೆ.
https://twitter.com/ShaliniKumawat0/status/1654894776049877002?ref_src=twsrc%5Etfw%7Ctwcamp%5Etweetembed%7Ctwterm%5E1655041172216385537%7Ctwgr%5E32ea6ee32d2be0796dd69b3f0dbf32ed928846d4%7Ctwcon%5Es2_&ref_url=https%3A%2F%2Fwww.freepressjournal.in%2Findia%2Fbihar-biker-performs-dangerous-stunt-on-patna-road-video-surfaces