ಒಳ್ಳೆತನಕ್ಕೆ ಬೆಲೆ ಇಲ್ಲ. ನೀವು ಸಹಾಯಕ್ಕೆ ಮುಂದಾದ್ರೆ ಸಹಾಯ ಪಡೆಯಲು ಮುಂದಾದವರು ನಿಮಗೆ ಮೋಸ ಮಾಡ್ಬಹುದು. ಇದಕ್ಕೆ ಈ ಘಟನೆ ಉತ್ತಮ ಉದಾಹರಣೆ. ಚಂಡೀಗಢದ ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ ವ್ಯಕ್ತಿಯೊಬ್ಬ ಜೇಬುಗಳ್ಳನಿಗೆ ಹೊಡೆಯುತ್ತಿದ್ದಾನೆ.
ವರದಿ ಪ್ರಕಾರ, ಬೈಕ್ ಸವಾರ, ವ್ಯಕ್ತಿಗೆ ಲಿಫ್ಟ್ ನೀಡಿದ್ದಾನೆ. ಆದ್ರೆ ಲಿಫ್ಟ್ ನೀಡಿದ ವ್ಯಕ್ತಿ ಜೇಬುಗಳ್ಳ ಎನ್ನುವುದು ಆತನಿಗೆ ತಿಳಿದಿರಲಿಲ್ಲ. ವ್ಯಕ್ತಿಯನ್ನು ಇಳಿಸಿದ ಮೇಲೆ ಪರ್ಸ್ ಕಾಣಿಸಲಿಲ್ಲ. ಅನುಮಾನಗೊಂಡ ಬೈಕ್ ಸವಾರ, ಕಳ್ಳನನ್ನು ಹಿಡಿದು ಚೆಕ್ ಮಾಡಿದಾಗ ಪರ್ಸ್ ಸಿಕ್ಕಿದೆ.
ಕೋಪಗೊಂಡ ಬೈಕ್ ಸವಾರ ಆತನಿಗೆ ಥಳಿಸಿಲ್ಲದೆ, ಆತನಿಂದ ತನ್ನ ಪರ್ಸ್ ಪಡೆದಿದ್ದಾನೆ. ಪರ್ಸ್ ನಲ್ಲಿ ಎಲ್ಲ ದಾಖಲೆ, ಹಣವಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಜನರು, ಯಾರಿಗೂ ಲಿಫ್ಟ್ ನೀಡ್ಬಾರದು ಎನ್ನುತ್ತಿದ್ದಾರೆ.
https://twitter.com/gharkekalesh/status/1823733927355539838?ref_src=twsrc%5Etfw%7Ctwcamp%5Etweetembed%7Ctwterm%5E1823733927355539838%7Ctwgr%5E7f66978c1676a6d57eb6395a023f8386efcf9222%7Ctwcon%5Es1_&ref_url=https%3A%2F%2Fnavbharattimes.indiatimes.com%2Fviral%2Fomg-news%2Fpocket-maar-ki-pitai-video-biker-gave-lift-to-pocket-picker-later-he-steals-purse-thrashed-for-stealing-watch-viral-video%2Farticleshow%2F112566038.cms