ಸಾಮಾಜಿಕ ಜಾಲತಾಣಗಳಲ್ಲಿ ಹಳೆ ವೈರಲ್ ವಿಡಿಯೋ ಒಂದು ಮತ್ತೆ ಹರಿದಾಡುತ್ತಿದೆ. ಇದರಲ್ಲಿ ರಾತ್ರಿ ವೇಳೆ ಸಂಚರಿಸುತ್ತಿದ್ದ ಬೈಕ್ ಸವಾರನ ಅವತಾರ ಕಂಡು ಜನ ಹೌಹಾರಿದ್ದಾರೆ. ಇದೀಗ ಮತ್ತೆ ವೈರಲ್ ಆಗಿರುವ ಈ ವಿಡಿಯೋ ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ವಿಡಿಯೋದಲ್ಲಿ ಕಂಡು ಬರುವಂತೆ ಈ ಬೈಕ್ ಸವಾರ ತನ್ನ ಮೈತುಂಬ ಪ್ರಕಾಶಿಸುವಂತೆ ಲೈಟ್ ಗಳನ್ನು ಹಾಕಿಕೊಂಡಿದ್ದು, ಆತನ ಹೆಲ್ಮೆಟ್ ಕೂಡ ಪ್ರಜ್ವಲಿಸುತ್ತಿದೆ. ಈತನ ಬಳಿ ಹೋದ ಸಾರ್ವಜನಿಕರು ಒಬ್ಬರು ಕುತೂಹಲದಿಂದ ಗಮನಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ವಿಡಿಯೋ ಯಾವಾಗ ಮತ್ತು ಎಲ್ಲಿ ಸೆರೆ ಹಿಡಿಯಲಾಗಿದೆ ಎಂಬುದು ತಿಳಿದು ಬಂದಿಲ್ಲ. ಆದರೆ ಇದನ್ನು ನೋಡಿದ ನೆಟ್ಟಿಗರು, ರಸ್ತೆಯಲ್ಲಿ ಬರುವ ವಾಹನಗಳ ಲೈಟ್ ಕಣ್ಣು ಕುಕ್ಕುವಂತಿದ್ದರೆ ಎದುರಿನಿಂದ ಬಂದವರು ವಾಹನ ಚಲಾಯಿಸುವುದು ಕಷ್ಟಕರವಾಗುತ್ತದೆ. ಅಂತಹುದರಲ್ಲಿ ಈತ ತನ್ನಿಡಿ ದೇಹಕ್ಕೆ ಲೈಟ್ ಹಾಕಿಕೊಂಡು ಬಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಮತ್ತೆ ಕೆಲವರು ಟೀಮ್ ನಲ್ಲಿ ವರ್ಕ್ ಮಾಡುವಾಗ ಎಲ್ಲರ ಗಮನ ಸೆಳೆಯಬೇಕೆಂದರೆ ಇಂತಹ ಟ್ರಿಕ್ಸ್ ಮಾಡಬಹುದು ಎಂದು ಉಚಿತ ಸಲಹೆಯನ್ನು ನೀಡಿದ್ದಾರೆ. ಒಟ್ಟಾರೆ ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳು ಬರ್ತಿದ್ದು, ನೀವು ಕೂಡ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ.
https://twitter.com/tatyabichumemer/status/1569726911420710913?ref_src=twsrc%5Etfw%7Ctwcamp%5Etweetembed%7Ctwterm%5E1569726911420710913%7Ctwgr%5Ef46b5756a2d8142bc694b0eaab6faf5536a94940%7Ctwcon%5Es1_&