BIG NEWS: ಹೆದ್ದಾರಿಯಲ್ಲಿ ವ್ಹೀಲಿಂಗ್: 6 ಪುಂಡರು ಅರೆಸ್ಟ್

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆ ಮತ್ತೆ ಬೈಕ್ ವ್ಹೀಲಿಂಗ್ ಹಾವಳಿ ಹೆಚ್ಚಾಗಿದೆ. ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ಸಮಸ್ಯೆ ನೀಡುತ್ತ ಪುಂಡಾಟ ಮೆರೆಯುತ್ತಿದ್ದ 6 ಜನರನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡಿ ಹೆಚ್ಚಾಟ ಮೆರೆಯುತ್ತಿದ್ದ 6 ಜನರನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ಈ ಘಟನೆ ನಡೆದಿದೆ.

ನೆಲಮಂಗಲ ಸಂಚಾರಿ ಪೊಲೀಸರು 13 ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ. ಶಿವರಾತ್ರಿ ಸೇರಿದಂತೆ ಇತರೆ ಹಬ್ಬಗಳ ಸಂದರ್ಭಗಳಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡಿ ಇತರ ವಾಹನಸವಾರರಿಗೂ ತೊಂದರೆ ಕೊಡುತ್ತಿದ್ದರು. ಆರಂಭದಲ್ಲಿ ವ್ಹೀಲಿಂಗ್ ದೃಶ್ಯ ಸೆರೆ ಹಿಡಿದ ಪೊಲಿಸರು ಬಳಿಕ ಆರು ಜನರನ್ನು ಬಂಧಿಸಿದ್ದರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read