ಯಾದಗಿರಿ: ತುಂಡಾಗಿ ಬಿದ್ದಿದ್ದ ಹೈಟೆನ್ಶನ್ ವಿದ್ಯುತ್ ವೈರ್ ತಗುಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಾದಗಿರಿಯ ಮಾತಾಮಣಿಕೇಶ್ವರ ನಗರದಲ್ಲಿ ನಡೆದಿದೆ.
ಕಾಜಾ ಪಟೇಲ್ (23) ಮೃತ ದುರ್ದೈವಿ. ವಡಗೇರಾ ತಾಲೂಕಿನ ಬಬಲಾದ ಗ್ರಾಮದ ನಿವಾಸಿ. ಸಹೋದರಿ ಮನೆಯಿಂದ ವಾಪಾಸ್ ಆಗುತ್ತಿದ್ದಾಗ ದಾರಿಯಲ್ಲಿ ತುಂಟಾಗಿ ಬಿದ್ದಿದ್ದ ಹೈಟೆನ್ಶನ್ ವೈರ್ ಗಮನಿಸದೇ ಬೈಕ್ ಚಲಾಯಿಸಿದ್ದು, ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.
ಬಿರುಗಾಳಿ ಮಳೆಯಿಂದಾಗಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.