ಪಾಟ್ನಾ: ಪಾಟ್ನಾದ ಇಂದ್ರಪುರಿ ಪ್ರದೇಶದಲ್ಲಿ ನಡೆದ ದುರಂತ ಘಟನೆಯಲ್ಲಿ ನಿಲ್ಲಿಸಿದ್ದ ಕಾರ್ ನೊಳಗೆ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿದೆ.
ಬಾಲಕಿ ಮತ್ತು ಬಾಲಕನ ಮೃತದೇಹಗಳನ್ನು ಶವಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣದ ಸಮಗ್ರ ತನಿಖೆ ಆರಂಭಿಸಲಾಗಿದೆ. ಬಾಲಕಿಗೆ ಸುಮಾರು ಒಂಬತ್ತು ವರ್ಷ ಮತ್ತು ಬಾಲಕನಿಗೆ ಸುಮಾರು ಐದು ವರ್ಷವಾಗಿದೆ.
ಇಂದ್ರಪುರಿ ಪ್ರದೇಶದಲ್ಲಿ ಕಾರ್ ನೊಳಗೆ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತಲುಪಿ ಶವಗಳನ್ನು ವಶಪಡಿಸಿಕೊಂಡಿದ್ದಾರೆ. ಮಕ್ಕಳ ಗುರುತನ್ನು ಕಂಡುಹಿಡಿಯಲು ಅವರು ಪ್ರಯತ್ನಿಸುತ್ತಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿಗೆ ನಿಖರವಾದ ಕಾರಣ ತಿಳಿಯಬಹುದು ಎಂದು ಪಾಟ್ನಾ(ಕೇಂದ್ರ) ಎಸ್‌ಪಿ ದೀಕ್ಷಾ ಹೇಳಿದ್ದಾರೆ.