Watch Video | ಮಕ್ಕಳಿಗೆ ವಿಶಿಷ್ಟ ರೀತಿಯಲ್ಲಿ ಬಣ್ಣಗಳ ಪರಿಚಯ ಮಾಡಿಸಿದ ಶಿಕ್ಷಕ

ಸಮಸ್ತಿಪುರ: ಬಿಹಾರದ ಸಮಸ್ತಿಪುರದಿಂದ ವೈರಲ್ ಆಗಿರುವ ಇತ್ತೀಚಿನ ವೀಡಿಯೊದಲ್ಲಿ, ಶಾಲೆಯ ಶಿಕ್ಷಕರೊಬ್ಬರು ವಿಶಿಷ್ಟ ಶೈಲಿಯಲ್ಲಿ ತರಗತಿ ತೆಗೆದುಕೊಳ್ಳುವುದನ್ನು ಕಾಣಬಹುದು.

ವೀಡಿಯೋದಲ್ಲಿ ಶಿಕ್ಷಕರು ಬಣ್ಣದ ಹೆಸರನ್ನು ಸಾಹಿತ್ಯವಾಗಿ ಹಾಡುತ್ತಿರುವುದನ್ನು ಕಾಣಬಹುದು, ಇದು ವಿದ್ಯಾರ್ಥಿಗಳು ಬಣ್ಣಗಳನ್ನು ಗುರುತಿಸುವಂತೆ ಮಾಡುವ ವಿಶಿಷ್ಟ ವಿಧಾನವಾಗಿದೆ. ಹೋಳಿ ಹಬ್ಬದಂದು ಈ ವಿಡಿಯೋ ವೈರಲ್ ಆಗಿದ್ದು, ಪಾಠದ ಮೌಲ್ಯವನ್ನು ಹೆಚ್ಚಿಸಿದೆ.

@kumarprakash4u ಎಂಬ ಟ್ವಿಟರ್​ ಬಳಕೆದಾರರು ಈ ವಿಡಿಯೋ ಶೇರ್​ ಮಾಡಿದ್ದಾರೆ. ಇಂಗ್ಲಿಷ್‌ನಲ್ಲಿ ವಿವಿಧ ಬಣ್ಣಗಳ ಹೆಸರುಗಳನ್ನು ಹಾಡುವುದು ಮತ್ತು ಹಿಂದಿಯಲ್ಲಿ ಮಕ್ಕಳಿಗೆ ಅರ್ಥವನ್ನು ವಿವರಿಸುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಬೈಜನಾಥ್ ರಜಾಕ್​ ಎಂಬ ಶಿಕ್ಷಕ ಈ ಹೊಸ ಯೋಚನೆ ಮಾಡಿದ್ದು, ಮಕ್ಕಳಿಗೆ ಬಣ್ಣಗಳ ಕುರಿತು ಹೇಳುತ್ತಿದ್ದಾರೆ.

ಈ ಶಿಕ್ಷಕನಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಭಲೆ ಭಲೆ ಎನ್ನುವ ಹಲವು ಕಮೆಂಟ್​ಗಳ ಸುರಿಮಳೆಯಾಗುತ್ತಿದೆ.

https://twitter.com/kumarprakash4u/status/1632345650326290433?ref_src=twsrc%5Etfw%7Ctwcamp%5Etweetembed%7Ctwterm%5E1632345650326290433%7Ctwgr%5E4b0edbdcf87aa5c2143cbcd53a98b60ccad33f37%7Ctwcon%5Es1_&ref_url=https%3A%2F%2Fwww.freepressjournal.in%2Feducation%2Fwatch-viral-video-unique-way-to-learn-the-names-of-colour

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read