Video: ಪರೀಕ್ಷೆಗೆ ಬರಲು ವಿಳಂಬ; ಗೇಟ್​ ಹಾರಿ ಒಳ ಹೋದ ವಿದ್ಯಾರ್ಥಿನಿಯರು

ಬಿಹಾರ: ಬಿಹಾರದ ಸೊಹ್ಸರಾಯ್‌ನಲ್ಲಿರುವ ಕಿಸಾನ್ ಕಾಲೇಜಿನಲ್ಲಿ ಪರೀಕ್ಷೆಗೆ ವಿದ್ಯಾರ್ಥಿಗಳು ತಡವಾಗಿ ಬಂದ ಕಾರಣ ಬಾಗಿಲು ಮುಚ್ಚಲಾಗಿತ್ತು. ತಮಗೆ ಪ್ರವೇಶ ನೀಡುವಂತೆ ವಿದ್ಯಾರ್ಥಿಗಳು ಮಾಡಿಕೊಂಡ ಮನವಿಯನ್ನು ಶಾಲೆ ಕೇಳಲಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಗೇಟ್ ಮೂಲಕ ಹತ್ತುವುದು ಮತ್ತು ಜಿಗಿಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವರದಿಗಳ ಪ್ರಕಾರ, ಮುಖ್ಯ ಗೇಟ್ ಅನ್ನು ಸಮಯಕ್ಕಿಂತ ಕನಿಷ್ಠ ಹತ್ತು ನಿಮಿಷಗಳ ಮೊದಲು ಮುಚ್ಚಲಾಗಿದೆ. ಪರೀಕ್ಷಾ ಕೇಂದ್ರವನ್ನು ತಲುಪಲು ವಿದ್ಯಾರ್ಥಿಗಳಿಗೆ ಅದಾಗಲೇ ಸೂಚನೆ ನೀಡಲಾಗಿತ್ತು. ಆದಾಗ್ಯೂ ವಿದ್ಯಾರ್ಥಿಗಳು ವಿಳಂಬವಾಗಿ ಬಂದರು. ಆದ್ದರಿಂದ ನಿಯಮದ ಪ್ರಕಾರ ಅವರಿಗೆ ಒಳಗೆ ಬಿಟ್ಟಿರಲಿಲ್ಲ.

ಈ ಹಿನ್ನೆಲೆಯಲ್ಲಿ ಪರೀಕ್ಷೆ ಮಿಸ್ ಆಗುವ ಭಯದಲ್ಲಿ ಅವರು, ಗೇಟ್ ಹತ್ತಿ ಪ್ರವೇಶಿಸಲು ಹಾತೊರೆದಿದ್ದರು. ಹಲವಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೀಗೆ ಗೇಟ್​ ಹತ್ತುತ್ತಿದ್ದರೆ, ಇದನ್ನು ಹಲವರು ಮೊಬೈಲ್​ನಲ್ಲಿ ಶೂಟ್​ ಮಾಡಿಕೊಳ್ಳುತ್ತಿದ್ದರು. ವಿದ್ಯಾರ್ಥಿಗಳು ಪರದಾಡುತ್ತಿದ್ದರೆ ಜನರು ಮಜಾ ನೋಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

https://twitter.com/thenews19_/status/1620702787968602112?ref_src=twsrc%5Etfw%7Ctwcamp%5Etweetembed%7Ctwte

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read