ಒಬ್ಬನಿಗಾಗಿ ಇಬ್ಬರು ಶಾಲಾ ಬಾಲಕಿಯರ ಫೈಟ್; ಹಾಡಹಗಲೇ ನಡೆದ ಕಾಳಗದ ‌ʼವಿಡಿಯೋ ವೈರಲ್ʼ | Watch

ಬಿಹಾರದ ಪೂರ್ನಿಯಾದಲ್ಲಿ ಇಬ್ಬರು ಸರ್ಕಾರಿ ಶಾಲಾ ಬಾಲಕಿಯರು ಒಬ್ಬ ಪ್ರೇಮಿಯ ಕಾರಣಕ್ಕೆ ಬೀದಿಯಲ್ಲಿ ಭೀಕರವಾಗಿ ಫೈಟ್‌ ಮಾಡುವ ಆಘಾತಕಾರಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಶಾಲಾ ಸಮವಸ್ತ್ರದಲ್ಲಿರುವ ಬಾಲಕಿಯರು, ಪ್ರೇಮಿಯ ವಿಚಾರಕ್ಕೆ ಜಗಳವಾಗಿ ಪರಸ್ಪರ ಹೊಡೆದಾಡಿಕೊಳ್ಳುವುದು, ಒದೆಯುವುದು ಮತ್ತು ಕೂದಲು ಎಳೆದುಕೊಳ್ಳುವುದು ವಿಡಿಯೊದಲ್ಲಿ ಕಾಣಿಸುತ್ತದೆ.

ವರದಿಗಳ ಪ್ರಕಾರ, ಇಬ್ಬರು ಬಾಲಕಿಯರು ಒಂದೇ ಹುಡುಗನೊಂದಿಗೆ ಸಂಬಂಧ ಹೊಂದಿದ್ದು, ಚಾಟ್ ಮಾಡುತ್ತಿದ್ದಾರೆ ಎಂದು ತಿಳಿದ ನಂತರ ಜಗಳ ಪ್ರಾರಂಭವಾಯಿತು. ಕೆಲವು ದಿನಗಳ ಹಿಂದೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು, ಬಾಲಕಿಯರು ಒಬ್ಬರನ್ನೊಬ್ಬರು ಬೆದರಿಸಿ ಹುಡುಗನಿಂದ ದೂರವಿರುವಂತೆ ಹೇಳಿದ್ದರು. ಶಾಲೆ ಮುಗಿದ ನಂತರ, ಇಬ್ಬರೂ ಬಾಲಕಿಯರು ತಮ್ಮ ಸ್ನೇಹಿತರೊಂದಿಗೆ ಶಾಲೆಯ ಹೊರಗೆ ಬೀದಿಯಲ್ಲಿ ಫೈಟ್‌ ನಡೆಸಿದ್ದಾರೆ.

ಬಾಲಕಿಯರ ಫೈಟ್‌ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇಬ್ಬರು ಬಾಲಕಿಯರು ಪರಸ್ಪರ ಹೊಡೆದುಕೊಳ್ಳುವುದು ವಿಡಿಯೊದಲ್ಲಿ ಕಾಣಿಸುತ್ತದೆ. ವೀಡಿಯೊವನ್ನು ಈ ಜಗಳ ನೋಡುತ್ತಿದ್ದ ಒಬ್ಬ ವ್ಯಕ್ತಿ ರೆಕಾರ್ಡ್ ಮಾಡಿ ನಂತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾರೆ.

ಸ್ಥಳದಲ್ಲಿ ಹಾಜರಿದ್ದ ಇತರ ಬಾಲಕಿಯರು ಮಧ್ಯಪ್ರವೇಶಿಸಿ ಫೈಟ್‌ ನಲ್ಲಿ ತೊಡಗಿದ್ದ ಬಾಲಕಿಯರನ್ನು ಬೇರ್ಪಡಿಸಿದ್ದು, ವಿಡಿಯೊ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿ ಬಾಲಕಿಯರನ್ನು ಜಗಳ ನಿಲ್ಲಿಸಿ ಹೋಗುವಂತೆ ಹೇಳುವುದು ಕೇಳಿಸುತ್ತದೆ, ಆದಾಗ್ಯೂ ಅವರು ಪರಸ್ಪರ ಹೊಡೆದುಕೊಳ್ಳುವುದನ್ನು ಮುಂದುವರಿಸಿದ್ದಾರೆ. ಇತರ ಬಾಲಕಿಯರ ಮಧ್ಯಪ್ರವೇಶದ ನಂತರವೇ ಜಗಳ ನಿಂತಿದೆ. ವೈರಲ್ ವಿಡಿಯೊದಲ್ಲಿ ಇತರ ಬಾಲಕಿಯರು ಜಗಳದಲ್ಲಿ ತೊಡಗಿದ್ದವರನ್ನು ನೋಡಿ ನಗುತ್ತಿರುವುದು ಕಂಡುಬರುತ್ತದೆ.

ವೈರಲ್ ವಿಡಿಯೊದ ನಿಖರವಾದ ಸ್ಥಳ ಇನ್ನೂ ತಿಳಿದಿಲ್ಲ ವಿಡಿಯೊದ ಸತ್ಯಾಸತ್ಯತೆ ಖಚಿತವಾಗಿಲ್ಲ. ಜಗಳದಲ್ಲಿ ಭಾಗಿಯಾದ ಬಾಲಕಿಯರ ವಿರುದ್ಧ ಯಾವುದೇ ಪೊಲೀಸ್ ಕ್ರಮ ಅಥವಾ ಶಾಲಾ ಅಧಿಕಾರಿಗಳಿಂದ ಯಾವುದೇ ಕ್ರಮ ಕೈಗೊಂಡ ವರದಿಗಳಿಲ್ಲ. ಆದಾಗ್ಯೂ, ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read