ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ತನ್ನ 40 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮುಖ್ಯಸ್ಥ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಸೇರಿದಂತೆ ಉನ್ನತ ನಾಯಕರು ಪಟ್ಟಿಯಲ್ಲಿದ್ದಾರೆ. ಪಟ್ಟಿಯಲ್ಲಿ ಪ್ರಮುಖ ನಾಯಕರು, ಮುಖ್ಯಮಂತ್ರಿಗಳು ಮತ್ತು ಸೆಲೆಬ್ರಿಟಿಗಳು ಇದ್ದಾರೆ. ಇದರಲ್ಲಿ 5 ಬಿಜೆಪಿ ಮುಖ್ಯಮಂತ್ರಿಗಳು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಅಸ್ಸಾಂ ಸಿಎಂ ಹೇಮಂತ್ ಬಿಸ್ವಾ ಶರ್ಮಾ, ದೆಹಲಿ ಸಿಎಂ ರೇಖಾ ಗುಪ್ತಾ, ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಮತ್ತು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಸೇರಿದ್ದಾರೆ.
ಮಾಜಿ ಕೇಂದ್ರ ಕ್ಯಾಬಿನೆಟ್ ಸಚಿವೆ ಸ್ಮೃತಿ ಇರಾನಿ, ಮಾಜಿ ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್, ರಾಧಾ ಮೋಹನ್ ಸಿಂಗ್, ಸಾಧ್ವಿ ನಿರಂಜನ್ ಜ್ಯೋತಿ ಮತ್ತು ಅಶ್ವಿನಿ ಕುಮಾರ್ ಚೌಬೆ ಕೂಡ ಸೇರಿದ್ದಾರೆ.
ಪಟ್ಟಿಯಲ್ಲಿರುವ ಇತರ ಪ್ರಮುಖ ಹೆಸರುಗಳು
ಬಿಹಾರದ ಉಪ ಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ, ಮಾಜಿ ಉಪ ಮುಖ್ಯಮಂತ್ರಿ ರೇಣು ದೇವಿ ಮತ್ತು ಇತರ ಹಲವು ರಾಜ್ಯ ಸಚಿವರು ಪಟ್ಟಿಯಲ್ಲಿದ್ದಾರೆ. ಈ ಪಟ್ಟಿಯಲ್ಲಿ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಕೇಂದ್ರ ಜಲ ಸಚಿವ ಸಿಆರ್ ಪಾಟೀಲ್, ಡಾ. ದಿಲೀಪ್ ಕುಮಾರ್ ಜೈಸ್ವಾಲ್, ಪ್ರೇಮ್ ಕುಮಾರ್, ನಿತ್ಯಾನಂದ್ ರೈ, ಸತೀಶ್ ಚಂದ್ರ ದುಬೆ, ರಾಜ್ ಭೂಷಣ್ ಚೌಧರಿ, ಅಶ್ವಿನಿ ಕುಮಾರ್ ಚೌಬೆ, ರಾಜೀವ್ ಪ್ರತಾಪ್ ರೂಡಿ, ಡಾ. ಸಂಜಯ್ ಜೈಸ್ವಾಲ್, ವಿನೋದ್ ತಾವ್ಡೆ, ಬಾಬುಲಾಲ್ ಸಿಂಗ್, ಗೋಪಾಲ್ ಸಿಂಗ್ ಮರಾಂಡಿ, ಜನದೀಪ್ ಕುಮಾರ್ ಮರಾಂಡಿ ಅವರಿದ್ದಾರೆ.
ಅವರೊಂದಿಗೆ ಭೋಜ್‌ಪುರಿ ಸಿನಿಮಾದ ನಟ-ಗಾಯಕ ರಾಜಕಾರಣಿ ಪವನ್ ಸಿಂಗ್, ಮನೋಜ್ ತಿವಾರಿ, ರವಿ ಕಿಶನ್, ದಿನೇಶ್ ಲಾಲ್ ಯಾದವ್ “ನಿರಾಹುವಾ” ಅವರಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ ಅಕ್ಟೋಬರ್ 17 ಆಗಿದ್ದು, ನವೆಂಬರ್ 6 ರಂದು ಮತದಾನ ನಡೆಯಲಿದೆ. ಬುಧವಾರದಂದು ಭಾರತೀಯ ಜನತಾ ಪಕ್ಷವು ಬಿಹಾರ ವಿಧಾನಸಭಾ ಚುನಾವಣೆಗೆ ತನ್ನ ಮೂರನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು, ಇದರಲ್ಲಿ 18 ಹೆಸರುಗಳಿವೆ.