ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಅವರ ಪತ್ನಿ ರಾಚೆಲ್ ಅಕಾ ರಾಜಶ್ರೀ ಯಾದವ್ ಅವರು ಹೆಣ್ಣುಮಗುವಿನ ಪೋಷಕರಾಗಿದ್ದಾರೆ. ಸೋಮವಾರ ದೆಹಲಿಯ ಆಸ್ಪತ್ರೆಯಲ್ಲಿ ತೇಜಸ್ವಿಯವರ ಪತ್ನಿ ರಾಚೆಲ್ ಹೆಣ್ಣು ಮಗುವಿಗೆ ಜನ್ಮ ನೀಡಿದರು.
ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನಾಯಕ ತೇಜಸ್ವಿ ಯಾದವ್ ಈ ಖುಷಿ ವಿಚಾರವನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ತೇಜಸ್ವಿ ಅವರ ಸಹೋದರಿ ರೋಹಿಣಿ ಆಚಾರ್ಯ ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಲು ಮತ್ತು ಅವರ ಸಹೋದರ ಮತ್ತು ಅತ್ತಿಗೆಯನ್ನು ಅಭಿನಂದಿಸಲು ಕಾವ್ಯಾತ್ಮಕ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ.
ಕುಟುಂಬದ ಇತರ ಸದಸ್ಯರು ಕೂಡ ತೇಜಸ್ವಿ ಯಾದವ್ ದಂಪತಿಯನ್ನ ಅಭಿನಂದಿಸಿದ್ದಾರೆ. ರಾಜಕಾರಣಿಗಳ ಪೈಕಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತೇಜಸ್ವಿ ಅವರನ್ನು ಅಭಿನಂದಿಸಿದವರಲ್ಲಿ ಮೊದಲಿಗರು.
“ಪವಿತ್ರ ನವರಾತ್ರಿಯ ದಿನಗಳಲ್ಲಿ ದೇವಿಯ ಈ ಆಶೀರ್ವಾದಕ್ಕಾಗಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅಭಿನಂದನೆಗಳು……” ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ: ತೇಜಸ್ವಿ ಡಿಸೆಂಬರ್ 2021 ರಲ್ಲಿ ತಮ್ಮ ದೀರ್ಘಕಾಲದ ಸ್ನೇಹಿತೆ ರಾಚೆಲ್ ಅವರನ್ನು ವಿವಾಹವಾದರು.
https://twitter.com/RohiniAcharya2/status/1640209077845229568?ref_src=twsrc%5Etfw%7Ctwcamp%5Etweetembed%7Ctwterm%5E1640209077845229568%7Ctwgr%5E23b6a43ae8fa897d3ee6fa2022999976da374426%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Ftheindianexpress-epaper-dh45fdd5a8110244f1a752805dfc5bb160%2Fbihardeputycmtejashwiyadavwelcomesbabydaughter-newsid-n484217986
https://twitter.com/ArvindKejriwal/status/1640211706344509441?ref_src=twsrc%5Etfw%7Ctwcamp%5Etweetembed%7Ctwterm%5E1640211706344509441%7Ctwgr%5E23b6a43ae8fa897d3ee6fa2022999976da374426%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Ftheindianexpress-epaper-dh45fdd5a8110244f1a752805dfc5bb160%2Fbihardeputycmtejashwiyadavwelcomesbabydaughter-newsid-n484217986