BREAKING : ಒಂದೇ ದಿನಕ್ಕೆ ‘ಬಿಗ್ ಬಾಸ್’ ಮನೆಯಿಂದ ಶಾಸಕ ಪ್ರದೀಪ್ ಈಶ್ವರ್ ಔಟ್…!

ಬೆಂಗಳೂರು : ಕಳೆದ ಶನಿವಾರದಿಂದ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭವಾಗಿದ್ದು, ಈಗಾಗಲೇ ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.

ಅಂತೆಯೇ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಕೂಡ ಅತಿಥಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ಇದು ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಬಹಳ ಅಚ್ಚರಿ ಉಂಟು ಮಾಡಿತ್ತು. ಅಲ್ಲದೇ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿ ಭಾರಿ ವಿರೋಧ ವ್ಯಕ್ತವಾಗಿತ್ತು. ಟಿವಿ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕರ ವಿರುದ್ಧ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆ ಒಂದೇ ದಿನದಿಂದ ಬಿಗ್ ಬಾಸ್ ಮನೆಯಿಂದ ಶಾಸಕ ಪ್ರದೀಪ್ ಈಶ್ವರ್ ಹೊರ ಬಂದಿದ್ದಾರೆ ಎನ್ನಲಾಗಿದೆ.

ಶಾಸಕ ಪ್ರದೀಪ್ ಈಶ್ವರ್ ಸ್ಪರ್ಧಿಗಳಿಗೆಂದು ಸಿಹಿ ತಂದಿದ್ದರು. ಆದರೆ ಅದನ್ನು ಪಡೆಯಲು ಕಂಟೆಸ್ಟಂಟ್ಸ್ ಗೆ ಟಾಸ್ಕ್ ನೀಡಿದ್ದರು . ಆ ಬಳಿಕ ಸ್ಪರ್ಧಿಗಳಿಗೆ ಸಿಹಿ ನೀಡಿದರು. ಇದಾದ ಬಳಿಕ ಪ್ರದೀಪ್ ಈಶ್ವರ್ ಬಿಗ್ ಬಾಸ್ ಆದೇಶದಂತೆ ಮನೆಯಿಂದ ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ. ವಿರೋಧಗಳ ಒತ್ತಡಕ್ಕೆ ಮಣಿದ ಬಿಗ್ ಬಾಸ್ ಈ ಆದೇಶ ಹೊರಡಿಸಿದ್ಯಾ..? ಅಥವಾ ಪ್ರದೀಪ್ ಈಶ್ವರ್ ಸ್ವಇಚ್ಚೆಯಿಂದ ಬಿಗ್ ಬಾಸ್ ಮನೆಯಿಂದ ಹೊರಬಂದರಾ ಎಂಬುದು ಗೊತ್ತಿಲ್ಲ. ಆದರೆ ಸದ್ಯ ಪ್ರದೀಪ್ ಈಶ್ವರ್ ಬಿಗ್ ಬಾಸ್ ಆದೇಶದಂತೆ ಮನೆಯಿಂದ ಹೊರಬಂದಿದ್ದಾರೆ ಎಂಬುದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.

ಕನ್ನಡ ಹೋರಾಟಗಾರ ಸಿಎಂ ಶಿವಕುಮಾರ್ ಪ್ರದೀಪ್ ವಿರುದ್ಧ   ಸ್ಪೀಕರ್ ಗೆ  ಲಿಖಿತ ದೂರು ನೀಡಿದ್ದು, ಪ್ರದೀಪ್ ಈಶ್ವರ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ದೂರಿನಲ್ಲಿ ಶಿವಕುಮಾರ್ ಮನವಿ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read