BIGGBOSS-10 : ಮರಳಿ ‘ಬಿಗ್ ಬಾಸ್’ ಮನೆಗೆ ಹೋದ ವರ್ತೂರು ಸಂತೋಷ್ ಗೆ ಬಿಗ್ ಶಾಕ್..!

ಬೆಂಗಳೂರು : ಮರಳಿ ಬಿಗ್ ಬಾಸ್ ಮನೆಗೆ ಹೋದ ವರ್ತೂರು ಸಂತೋಷ್ ಗೆ ಶಾಕ್ ಎದುರಾಗಿದೆ. ಹೌದು, ಜೈಲಿಂದ ಬಿಡುಗಡೆಯಾಗಿ ಬಿಗ್ ಬಾಸ್ ಮನೆಗೆ ಹೋದ ಸಂತೋಷ್ ಗೆ ಎಲಿಮಿನೇಷನ್ ಶಾಕ್ ತಗುಲಿದೆ.

ಹೌದು, ಬಿಗ್ ಬಾಸ್ ಮನೆಯಲ್ಲಿ ಹಲವು ಸದಸ್ಯರು ಸಂತೋಷ್ ಎಲಿಮಿನೇಟ್ ಆಗಬೇಕು ಎಂದು ಹೇಳಿದ್ದಾರೆ.
ಕಳೆದ ವಾರ ಸಂತೋಷ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ಹಲವು ಸ್ಪರ್ಧೆಗಳು, ಸವಾಲುಗಳು ನಡೆದಿದೆ. ತಮ್ಮನ್ನು ತಾವು ಸೇಫ್ ಮಾಡಿಕೊಳ್ಳಲು ಸ್ಪರ್ಧಿಗಳಿಂದ ಜಿದ್ದಾ ಜದ್ದಿನ್ ಕಾಂಪಿಟೇಶನ್ ನಡೆದಿದೆ. ಆದರೆ ಈ ಸಮಯದಲ್ಲಿ ಸಂತೋಷ್ ಇರಲಿಲ್ಲ, ಹಾಗಾಗಿ ಅವರು ಸೇಫ್ ಜೋನ್ ನಲ್ಲಿ ಇರಲು ಅರ್ಹರಲ್ಲ. ಅವರನ್ನು ಎಲಿಮಿನೇಟ್ ಮಾಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಖುಷಿ ಖುಷಿಯಿಂದ ಬಿಗ್ ಬಾಸ್ ಮನೆಗೆ ಕಾಲಿಟ್ಟ ಸಂತೋಷ್ ಖುಷಿ ಮಾಯವಾಗಿದೆ. ಇನ್ನೂ ಬಿಗ್ ಬಾಸ್ ಎಲಿಮಿನೇಟ್ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತದೆ ಕಾದು ನೋಡಬೇಕಾಗಿದೆ.

ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದ ವರ್ತೂರು ಸಂತೋಷ್ ಕನ್ನಡದ ಬಿಗ್ ಬಾಸ್ ಮನೆಗೆ ಮರಳಿದ್ದಾರೆ.
ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಿಗ್ಬಾಸ್ ಮನೆಯಿಂದ ಹೊರಗೆ ಹೋಗಿದ್ದ ವರ್ತೂರ್ ಸಂತೋಷ್ ಮತ್ತೆ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿ ಇದ್ದ ಉಳಿದ ಸ್ಪರ್ಧಿಗಳಿಗೆ ಅಚ್ಚರಿಯಾಗಿತ್ತು. ಕಾರ್ಯಕ್ರಮ ಪ್ರಸಾರವಾದ ಎರಡು ವಾರಗಳ ನಂತರ, ಅರಣ್ಯ ಅಧಿಕಾರಿಗಳು ಬೆಂಗಳೂರಿನ ಹೊರವಲಯದಲ್ಲಿರುವ ಬಿಗ್ ಬಾಸ್ ಸೆಟ್ ಗೆ ಭೇಟಿ ನೀಡಿ ಹುಲಿ ಉಗುರು ಪೆಂಡೆಂಟ್ ಪ್ರದರ್ಶಿಸಿದ್ದಕ್ಕಾಗಿ ವರ್ತೂರು ಸಂತೋಷ್ ಅವರನ್ನು ಬಂಧಿಸಿದ್ದರು.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read