BIGG NEWS : `ಅನುಕಂಪದ ಆಧಾರದ ನೇಮಕಾತಿ’ : ಅರ್ಹ ಅಭ್ಯರ್ಥಿಗಳಿಗೆ ಬಹುಮುಖ್ಯ ಮಾಹಿತಿ

ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅನುಕಂಪದ ಆಧಾರ ನೇಮಕಾತಿ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರವು ಮಹತ್ವದ ಮಾಹಿತಿಯೊಂದನ್ನು ನೀಡಿದೆ.

ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ನಿಧನ ಹೊಂದಿದ ನೌಕರರ ಅವಲಂಬಿತರಿಗೆ ಉಲ್ಲೇಖ(1)ರ ನಿಯಮಗಳಡಿಯಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡುವ ಸಲುವಾಗಿ ಅನುಬಂಧ-1 ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ಉಲ್ಲೇಖ(2)ರ ಆದೇಶದ ಪ್ರಕಾರ ಸಮಾಲೋಚನೆಯನ್ನು ದಿನಾಂಕ:30.09.2023 ಬೆಳಿಗ್ಗೆ 11.00 ಘಂಟೆಗೆ “Meeting hall ” 3ನೇ ಮಹಡಿ, ಪಶ್ಚಿಮ ಭಾಗ, ಆರೋಗ್ಯ ಸೌಧ, ಮಾಗಡಿ ರಸ್ತೆ, ಬೆಂಗಳೂರು-23, ಇಲ್ಲಿ ನಿಗದಿಪಡಿಸಲಾಗಿರುವುದರಿಂದ ಎಲ್ಲಾ ಅಭ್ಯರ್ಥಿಗಳು ತಪ್ಪದೆ ಹಾಜರಾಗಲು ಸೂಚಿಸಿದೆ.

1 ಸಮಾಲೋಚನೆಯಲ್ಲಿ ಅಭ್ಯರ್ಥಿಯು ಸ್ವ-ಇಚ್ಚೆಯಿಂದ ಸ್ಥಳ ಆಯ್ಕೆ ಮಾಡಿಕೊಂಡ ನಂತರ ಮತ್ತೆ ಸ್ಥಳ ಬದಲಾವಣೆಗೆ ಅವಕಾಶವಿರುವುದಿಲ್ಲ.

2, ಸಮಾಲೋಚನೆಗೆ ಗೈರುಹಾಜರಾದ ಅಭ್ಯರ್ಥಿಗಳಿಗೆ ಸು-ಮೋಟೋ(su-moto)ಆಧಾರದ ಮೇಲೆ ಸ್ಥಳನಿಯುಕ್ತಿ ಗೊಳಿಸಲಾಗುವುದು.

  1. ಸಮಾಲೋಚನೆಗೆ ಹಾಜರಾದ ಸಂದರ್ಭದಲ್ಲಿ ಮೊಬೈಲ್ ಬಳಕೆಯನ್ನು ನಿರ್ಬಂಧಿಸಿದೆ, ಯಾವುದೇ ದೂರವಾಣಿ ಕರೆಯನ್ನು ಮಾಡುವುದು ಹಾಗೂ ಗಣ್ಯವ್ಯಕ್ತಿಗಳ ಒತ್ತಡ ತರುವುದು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಯ ವಿರುದ್ಧ ತಕ್ಷಣ ಜಾರಿಗೆ ಬರುವಂತೆ ಕ್ರಮ ಜರುಗಿಸಿ ನೇಮಕಾತಿ ರದ್ದು ಪಡಿಸಲಾಗುವುದು.
  2. ಅಭ್ಯರ್ಥಿಗಳು ಗುರುತಿಗಾಗಿ ಆಧಾರಕಾರ್ಡ್ ಚುನಾವಣಾ ಗುರುತಿನ ಚೀಟಿ/ ಪಾಸ್‌ಪೋರ್ಟ್‌/ ವಾಹನಚಾಲನ ಪರವಾನಗಿ ಇವುಗಳಲ್ಲಿ ಯಾವುದಾದರೂ ಹಾಜರುಪಡಿಸತಕ್ಕದ್ದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read