BIGG NEWS : `ಒಪ್ಪಂದದ ಮೇರೆ’ಗೆ `KSRTC’ ಬಸ್ ಬುಕ್ ಮಾಡುವವರಿಗೆ ಬಿಗ್ ಶಾಕ್ : ದರ ಹೆಚ್ಚಳ

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸಾಂಧರ್ಭಿಕ ಒಪ್ಪಂದದ ಮೇರೆಗೆ ಸಾರಿಗೆ ಬಸ್ ( KSRTC) ಕೊಂಡೊಯ್ಯೋರಿಗೆ  ಬಿಗ್ ಶಾಕ್ ನೀಡಿದ್ದು,  ಪ್ರೀಮಿಯಂ ಬಸ್ಸುಗಳ ಸಾಂದರ್ಭಿಕ ಒಪ್ಪಂದದ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳನ್ನು ಸಾಂದರ್ಭಿಕ ಒಪ್ಪಂದದ ಮೇಲೆ ಒದಗಿಸಲು ವಿಧಿಸಬೇಕಾದ  ದರ. ಕಿ.ಮೀ. ಷರತ್ತು ನಿಬಂಧನೆಗಳ ಸಂಬಂಧ. ಉಲ್ಲೇಖಿತ ಸಾಮಾನ್ಯ ಸ್ಥಾಯಿ ಆದೇಶ ಹಾಗೂ ಸುತ್ತೋಲೆಗಳಲ್ಲಿ ನಿರ್ದೇಶನಗಳನ್ನು ನೀಡಲಾಗಿರುತ್ತದೆ.

ಮುಂದುವರೆದು . ಡೀಸೆಲ್ ಹಾಗೂ ಸಿಬ್ಬಂದಿ ವೆಚ್ಚಗಳ ಹೆಚ್ಚಳದಿಂದಾಗಿ ಕಾರ್ಯಾಚರಣೆ ವೆಚ್ಚ ಅಧಿಕವಾಗಿರುವ ಕಾರಣದಿಂದ ಪ್ರೀಮಿಯಂ ಬಸ್ಸುಗಳ ಸಾಂದರ್ಭಿಕ ಒಪ್ಪಂದದ ದರಗಳನ್ನು ಪರಿಷ್ಕರಿಸಲಾಗಿದೆ.

ರಾಜಹಂಸ  ಎಕ್ಸಿಕ್ಯೂಟಿವ್, ರಾಜಹಂಸ, ರಾಜಹಂಸ (12 ಮೀಟರ್ ಚಾಸಿಸ್), ಮೈಸೂರು ನಗರ ಸಾರಿಗೆ ಸೆಮಿ-ಲೋಫ್ಲೋರ್, ಮಿಡಿ ಬಸ್ಸುಗಳ ಸಾಂದರ್ಭಿಕ ಒಪ್ಪಂದದ ದರಗಳನ್ನೇ ಮುಂದುವರೆಸಲಾಗಿದೆ. ಉಲ್ಲೇಖ-9 ರಲ್ಲಿನ ಪ್ರೀಮೀಯಂ ಬಸ್ಸುಗಳನ್ನು ಗಂಟೆಗಳ ಆಧಾರದಲ್ಲಿ ಸಾಂದರ್ಭಿಕ ಒಪ್ಪಂದದ ಮೇಲೆ ಒದಗಿಸುವ ದರಗಳನ್ನು ಪರಿಷ್ಕರಿಸಲಾಗಿದೆ ಹಾಗೂ ಲಭ್ಯವಿರುವ ಎಲ್ಲಾ ಪ್ರೀಮಿಯಂ ಬಸ್ಸಿನ ವರ್ಗಗಳನ್ನು ಇದರಲ್ಲಿ ಸೇರಿಸಲಾಗಿರುತ್ತದೆ.

ಎಲ್ಲಾ ವಾಹನ ವರ್ಗಗಳ ಸಾಂದರ್ಭಿಕ ಒಪ್ಪಂದದ ದರಪಟ್ಟಿಯನ್ನು ಅನುಬಂಧ-ಅ ರಲ್ಲಿ ಅಡಕಗೊಳಿಸಲಾಗಿದೆ. (ದಿನದ  ಆಧಾರದಲ್ಲಿ ನೀಡುವ ವಾಹನಗಳ ವಿವರಗಳು ಹಾಗೂ 12 ಗಂಟೆ ಅವಧಿಯಲ್ಲಿ ನೀಡುವ ವಾಹನಗಳ ವಿವರಗಳು ಒಳಗೊಂಡಂತೆ).

ಪರಿಷ್ಕೃತ  ದರಗಳು ದಿನಾಂಕ 20/11/2023 ರಿಂದ ಜಾರಿಗೆ ಬರಲಿವೆ. ಈ ಆದೇಶ ಹೊರಡಿಸುವ ಮೊದಲು ಬುಕಿಂಗ್ ಮಾಡಿಕೊಂಡಿರುವ ಒಪ್ಪಂದದ ವಾಹನಗಳಿಗೆ, ಹಳೆಯ ದರಗಳನ್ನು ವಿಧಿಸುವುದು. ಇನ್ನುಳಿದಂತೆ ಉಲ್ಲೇಖಿತ ಸಾಮಾನ್ಯ ಸ್ಥಾಯಿ ಆದೇಶ / ಸುತ್ತೋಲೆಗಳಲ್ಲಿ ಇತರೆ ನಿಯಮಾವಳಿಗಳಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ. ಈ ಸುತ್ತೋಲೆ ಸ್ವೀಕರಿಸಿ ಜಾರಿಗೊಳಿಸಿದ ಬಗ್ಗೆ ಅನುಸರಣಾ ವರದಿ ಕಳುಹಿಸುವುಂತೆ ಸೂಚನೆ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read