BIGG NEWS :ನಟ ಸನ್ನಿ ಡಿಯೋಲ್ ಮುಂಬೈ ಬಂಗಲೆ ಹರಾಜು ನೋಟಿಸ್ ಹಿಂಪಡೆದ ಬ್ಯಾಂಕ್ ಆಫ್ ಬರೋಡಾ!

ನವದೆಹಲಿ: 56 ಕೋಟಿ ರೂ.ಗಳ ಸಾಲವನ್ನು ಮರುಪಾವತಿಸಲು ವಿಫಲವಾದ ನಂತರ ನಟ ಸನ್ನಿ ಡಿಯೋಲ್ ಅವರ ಮುಂಬೈನ ಜುಹುನಲ್ಲಿರುವ ಬಂಗಲೆಯನ್ನು ಇ-ಹರಾಜು ಮಾಡುವ ಬಗ್ಗೆ ನೀಡಿದ ನೋಟಿಸ್ ಅನ್ನು “ತಾಂತ್ರಿಕ ಕಾರಣಗಳನ್ನು” ಉಲ್ಲೇಖಿಸಿ ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಸೋಮವಾರ ಹಿಂತೆಗೆದುಕೊಂಡಿದೆ.

ಬಿಒಬಿ ಇ-ಹರಾಜು ನೋಟಿಸ್ ನೀಡಿದ ಒಂದು ದಿನದ ನಂತರ ಕೊರಿಜೆಂಡಮ್ (ಸರಿಪಡಿಸಬೇಕಾದ ದೋಷ) ಬಂದಿದೆ. “ಅಜಯ್ ಸಿಂಗ್ ಡಿಯೋಲ್ ಅಲಿಯಾಸ್ ಸನ್ನಿ ಡಿಯೋಲ್ ಅವರಿಗೆ ಸಂಬಂಧಿಸಿದ ಮಾರಾಟ ನೋಟಿಸ್ ಅನ್ನು ತಾಂತ್ರಿಕ ಕಾರಣಗಳಿಂದಾಗಿ ಹಿಂತೆಗೆದುಕೊಳ್ಳಲಾಗಿದೆ…”

ಸನ್ನಿ ಡಿಯೋಲ್ ಅವರ ಇತ್ತೀಚಿನ ಚಿತ್ರ ‘ಗದರ್ 2’ ರ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದು, ಇದೇ ವೇಳೆ ನಟನಿಗೆ ತೊಂದರೆ ಆದಂತಿದೆ. ಪತ್ರಿಕೆಯೊಂದರಲ್ಲಿ ಬ್ಯಾಂಕ್ ಹೊರಡಿಸಿದ ನೋಟೀಸ್‌ನಲ್ಲಿ ಜುಹುವಿನ ಸನ್ನಿ ವಿಲ್ಲಾದಲ್ಲಿರುವ ಅವರ ಬಂಗಲೆ ಬಾಕಿ ಪಾವತಿಸದ ಕಾರಣ ಸೆಪ್ಟೆಂಬರ್ 25 ರಂದು ಹರಾಜು ಇ –ಹರಾಜು ಆಗಲಿದೆ ಎಂದು ಸೂಚಿಸಿತ್ತು. ಸದ್ಯ ಈ ಹರಾಜು ಪ್ರಕ್ರಿಯೆಯನ್ನು ತಾಂತ್ರಿಕ ಕಾರಣ ನೀಡಿ ಹರಾಜು ನೋಟಿಸ್ ಹಿಂಪಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read