BIGG NEWS : ಬಿಜೆಪಿ ಸರ್ಕಾರದ ಮತ್ತೊಂದು ಯೋಜನೆ ರದ್ದು!

ಬೆಂಗಳೂರು : ಹಿಂದಿನ ಬಿಜೆಪಿ ಸರ್ಕಾರದ ಪ್ರಮುಖ ಯೋಜನೆಯಾದ ಶಿಶುಪಾಲನಾ ಯೋಜನೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ರದ್ದುಪಡಿಸಿದೆ.

ಕಟ್ಟಡ ಕಾರ್ಮಿಕರ 6 ವರ್ಷದೊಳಗಿನ ಮಕ್ಕಳ ಪೋಷಣೆಗೆಂದು 2020-21ರಲ್ಲಿ ಹಿಂದಿನ ಸರಕಾರ ಸ್ಥಾಪಿಸಿದ್ದ 137 ಶಿಶುಪಾಲನ ಕೇಂದ್ರಗಳನ್ನು ರದ್ದುಪಡಿಸಿ ಸರಕಾರ ಆದೇಶಿಸಿದೆ.

2020-21ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಇದಕ್ಕಾಗಿ ಕಾರ್ಮಿಕ ಇಲಾಖೆಯಿಂದ ಹಣ ವ್ಯಯಿಸಿ ಸಂಚಾರಿ ಶಿಶುಪಾಲನ ಕೇಂದ್ರಗಳೂ ಸೇರಿದಂತೆ ಒಟ್ಟು 137 ಶಿಶುಪಾಲನ ಕೇಂದ್ರಗಳನ್ನು ತೆರೆದಿತ್ತು. ಈ ಮೂಲಕ ಮಗುವಿನ ಆರೈಕೆಯ ಹೊರೆಯನ್ನು ಕಡಿಮೆ ಮಾಡಿ, ತಾಯಿಗೆ ಉದ್ಯೋಗದಲ್ಲಿ ತೊಡಗುವ ಅವಕಾಶ ನೀಡಲಾಗಿತ್ತು. ಆದರೀಗ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಿಇಒ ನೀಡಿರುವ ವರದಿ ಆಧರಿಸಿ  ಸಂಚಾರಿ ಶಿಶುಪಾಲನ ಕೇಂದ್ರಗಳೂ ಸೇರಿ 137 ಶಿಶುಪಾಲನ ಕೇಂದ್ರಗಳನ್ನೂ ರದ್ದುಪಡಿಸಿ ಕಾರ್ಮಿಕ ಇಲಾಖೆ ಆದೇಶಿಸಿದೆ.

ರಾಜ್ಯಾದ್ಯಂತ  ನಾಲ್ಕು ಸಾವಿರ ಗ್ರಾಮ ಪಂಚಾಯತ್ ಗಳಲ್ಲಿ ಶೀಘ್ರದಲ್ಲೇ ‘ಕೂಸಿನ ಮನೆ’ ಶಿಶುಪಾಲನಾ ಕೇಂದ್ರಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ. ನರೇಗಾ ಕೂಲಿ‌ ಕಾರ್ಮಿಕರ 3 ವರ್ಷದೊಳಗಿನ ಮಕ್ಕಳ ಪಾಲನೆ, ಪೋಷಣೆಗೆ ರಾಜ್ಯಾದ್ಯಂತ 40 ಕೋಟಿ ವೆಚ್ಚದಲ್ಲಿ 4,000 ಗ್ರಾಮ ಪಂಚಾಯತಿಗಳಲ್ಲಿ ‘ಕೂಸಿನ ಮನೆ’ ಶಿಶು ಪಾಲನಾ ಕೇಂದ್ರಗಳನ್ನು ಪ್ರಾರಂಭಿಸಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read