BIGG NEWS : ರಾಜ್ಯದ ಜಲ ಸಮಸ್ಯೆ ಕುರಿತು ಕೇಂದ್ರ ಸರ್ಕಾರದ ಬಳಿಗೆ `ಸರ್ವ ಪಕ್ಷ ನಿಯೋಗ’ : ಸಿಎಂ ಸಿದ್ದರಾಮಯ್ಯ ಹೇಳಿಕೆ

 

ಬೆಂಗಳೂರು : ಕಾವೇರಿ ನದಿ ಸೇರಿದಂತೆ ಜಲ ವಿವಾದಗಳ ಕುರಿತಂತೆ ಸರ್ವಪಕ್ಷಗಳ ನಿಯೋಗ ಪ್ರಧಾನಿ ನರೇಂದ್ರ ಮೋದಿ   ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸರ್ವಪಕ್ಷಗಳ ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ,ಮೇಕೆದಾಟು ಮಹದಾಯಿ ಮತ್ತು ಕಾವೇರಿ ನದಿ ವಿವಾದ ಬಗ್ಗೆ ಸರ್ವ ಪಕ್ಷಗಳ ಇದಕ್ಕೆ ಸರ್ವ ಪಕ್ಷಗಳು ಸಮ್ಮತಿ ಸೂಚಿಸಿವೆ,ಜಲ ವಿವಾದಗಳ ಕುರಿತಂತೆ ಸರ್ವಪಕ್ಷಗಳ ನಿಯೋಗ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಜಲ ವಿವಾಧಗಳ ಬಗ್ಗೆ ಮನವರಿಕೆ ಮಾಡಿಕೊತ್ತೇವೆ ಎಂದರು.

ರಾಜ್ಯ ಸರ್ಕಾರ ರೈತರ ಹಿತ ಕಾಪಾಡಲಿದೆ. ರಾಜ್ಯ ಸರ್ಕಾರ ರಾಜ್ಯದ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ನಿಲುವುಗಳಿಗೆ ಬೆಂಬಲವಿದೆ ಎಂದು ಸರ್ವ ಪಕ್ಷದ ನಾಯಕರು ಹೇಳಿದ್ದಾರೆ. ಕೆ ಆರ್ ​ಎಸ್​ ಡ್ಯಾಂನಿಂದ ತಮಿಳುನಾಡಿಗೆ ಆಗಸ್ಟ್ ಕೊನೆಯವರೆಗೆ 86.38 ಟಿಎಂಸಿ ನೀರು ಬಿಡಬೇಕಾಗಿತ್ತು. ಜೂನ್​ನಲ್ಲಿ ಮಳೆಯ ಕೊರತೆ ಆಗಿತ್ತು, ಜುಲೈನಲ್ಲಿ ಮಳೆ ಬಂದಿದೆ. ಆಗಸ್ಟ್​ ತಿಂಗಳಿನಲ್ಲಿ ಮಳೆ ಕೊರತೆ ಆಗಿದೆ. ಸುಪ್ರೀಂಕೋರ್ಟ್​​ ತೀರ್ಪಿನ ಪ್ರಕಾರ ಜೂನ್​ನಲ್ಲಿ ಎರಡು ಟಿಎಂಸಿ ನೀರು, ಜುಲೈನಲ್ಲಿ 8.74 ಟಿಎಂಸಿ, ಆಗಸ್ಟ್​ನಲ್ಲಿ 26 ಟಿಎಂಸಿ ನೀರು ಬಿಟ್ಟಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read