BREAKING : ಬಿಗ್ ಬಾಸ್ ಸ್ಪರ್ಧಿ ರಜತ್’ಗೆ ಟ್ರೋಲರ್ಸ್’ಗಳ ಬ್ಲಾಕ್’ಮೇಲ್ : ಪೊಲೀಸರಿಗೆ ದೂರು ನೀಡಿದ ಪತ್ನಿ.!

ಬೆಂಗಳೂರು : ಮಾಜಿ ಗೆಳತಿ ಜೊತೆಗಿನ ‘ಬಿಗ್ ಬಾಸ್’ ಸ್ಪರ್ಧಿ ರಜತ್ ಫೋಟೋ ವೈರಲ್ ಆಗಿದ್ದು, ರಜತ್ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

ರಜತ್ ಕುಟುಂಬಕ್ಕೆ ಟ್ರೋಲ್ ಪೇಜ್ ಗಳ ಕಾಟ ಹೆಚ್ಚಾಗಿದ್ದು, ಟ್ರೋಲ್ ಪೇಜ್ ಗಳು ಇಬ್ಬರು ಜೊತೆಗಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ನಂತರ ಫೋಟೋ ಡಿಲೀಡ್ ಮಾಡಲು ರಜತ್ ಪತ್ನಿ ಬಳಿ ಹಣಕ್ಕೆ ಬೇಡಿಕೆ ಇಡಲಾಗಿದೆ.

ಅಪರಿಚಿತರು ನೀಡಿದ ಯುಪಿಐಗೆ ರಜತ್ ತಾಯಿ 6500 ಹಣ ಹಾಕಿದ್ದು, ಹಣ ಹಾಕುತ್ತಿದ್ದಂತೆ ಮತ್ತೊಂದು ಟ್ರೋಲ್ ಪೇಜ್ ಗಳಲ್ಲಿ ಫೋಟೋ ಅಪ್ ಲೋಡ್ ಆಗಿದೆ. ಅಲ್ಲದೇ ಫೋಟೋ ಡಿಲೀಟ್ ಮಾಡಲು ಹಣ ನೀಡುವಂತೆ ಟ್ರೋಲಿಗರು ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.ಇದರಿಂದ ಬೇಸತ್ತು ರಜತ್ ಪತ್ನಿ ಅಕ್ಷಿತಾ ಅವರು ಪಶ್ಚಿಮ ವಿಭಾಗದ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read