ಬೆಂಗಳೂರು : ಕಾಂತಾರ ಚಾ. 1 ಚಿತ್ರದ ಬಗ್ಗೆ ಬಿಗ್ ಅಪ್ ಡೇಟ್ ಹೊರಬಿದ್ದಿದ್ದು, ಕಳರಿಪಯಪಟ್ಟು ವೀರನ ಭಂಗಿಯಲ್ಲಿ ನಟ ರಿಷಬ್ ಶೆಟ್ಟಿ ಮಿಂಚಿದ್ದಾರೆ.
ಕಾಂತಾರ ಚಾ. 1 ಚಿತ್ರದಲ್ಲಿ ಕಳರಿಪಯಪಟ್ಟು ವೀರನ ಭಂಗಿಯಲ್ಲಿ ನಟ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದು, ನ್ಯೂ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ. ಕಳರಿಪಯಪಟ್ಟು ವೀರನ ಭಂಗಿಯಲ್ಲಿ ಅವರು ಖಡಕ್ ಆಗಿ ಕಾಣಿಸಿಕೊಂಡಿದ್ದು, ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.
ಹೊಂಬಾಳೆ ಫಿಲಂಸ್ ನಿರ್ಮಾಣದ ‘ನಿರ್ಮಾಪಕ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಕಾಂತಾರ ಚಾಪ್ಟರ್ 1 ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ.ದಟ್ಟ ಗುಹೆಯಲ್ಲಿ ರುದ್ರಾಕ್ಷಿ ಮಾಲೆ ಧರಿಸಿ ನಿಂತಿರುವ ರಿಷಬ್ ಶೆಟ್ಟಿಯ ಫಸ್ಟ್ ಲುಕ್ ಇತ್ತೀಚೆಗೆ ಎಲ್ಲರ ಗಮನ ಸೆಳೆದಿತ್ತು.
https://twitter.com/shetty_rishab/status/1826480642596483184?ref_src=twsrc%5Etfw%7Ctwcamp%5Etweetembed%7Ctwterm%5E1826480642596483184%7Ctwgr%5Eecc4afbffcb422382debb0fdffa4828bcd0c880d%7Ctwcon%5Es1_&ref_url=https%3A%2F%2Fpublictv.in%2Frishab-shettys-kantara-chapter-1-kalari-payattu-look-reveal%2F