ನವದೆಹಲಿ: ಕೇಂದ್ರ ಸಾರಿಗೆ ಇಲಾಖೆ ಮಾಳಿನ್ಯ ನಿಯಂತ್ರಣ ಉದ್ದೇಶದಿಂದ ಹಳೆಯ ವಾಹನಗಳ ಬಳಕೆ ತಡೆಯಲು ಮುಂದಾಗಿದ್ದು, 10 ವರ್ಷಕ್ಕಿಂತಲೂ ಅಧಿಕ ಹಳೆ ವಾಹನಗಳ ಮೇಲಿನ ಫಿಟ್ನೆಸ್ ದೃಢೀಕರಣ ಪತ್ರ(ಎಫ್.ಸಿ.) ನವೀಕರಣ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿದೆ.
10 ರಿಂದ 15 ವರ್ಷ, 15 ರಿಂದ 20 ವರ್ಷ ಮತ್ತು 20 ವರ್ಷಕ್ಕಿಂತ ಹಳೆಯ ವಾಹನಗಳೆಂದು ಮೂರು ಸ್ಲ್ಯಾಬ್ ಮಾಡಲಾಗಿದೆ. ಇದಕ್ಕೆ ಪ್ರತ್ಯೇಕ ದರ ನಿಗದಿಪಡಿಸಲಾಗಿದೆ.
20 ವರ್ಷಗಳಿಂದ ಹಳೆಯ ಲಘು ಮೋಟಾರ್ ವಾಹನಗಳಿಗೆ(ಎಲ್.ಎಂ.ವಿ.) ಎಫ್.ಸಿ. ನವೀಕರಣ ಶುಲ್ಕವನ್ನು 10,000 ರೂ. ನಿಂದ 15000 ರೂ.ಗೆ ಹೆಚ್ಚಳ ಮಾಡಲಾಗಿದೆ.
ಮಧ್ಯಮ ಗಾತ್ರದ ವಾಣಿಜ್ಯ ವಾಹನಗಳ ಶುಲ್ಕವನ್ನು 15,000 ರೂ.ನಿಂದ 20,000 ರೂ.ಗೆ ಹೆಚ್ಚಳ ಮಾಡಲಾಗಿದೆ.
20 ವರ್ಷಕ್ಕಿಂತ ಹಳೆಯ ದ್ವಿಚಕ್ರ ವಾಹನಗಳ ಎಫ್.ಸಿ. ನವೀಕರಣ ಶುಲ್ಕವನ್ನು 600 ರೂ.ನಿಂದ 2000 ರೂ.ಗೆ ಹೆಚ್ಚಳ ಮಾಡಲಾಗಿದೆ.
20 ವರ್ಷಗಳಿಗಿಂತ ಹಳೆಯ ಟ್ರಕ್ ಗಳು ಮತ್ತು ಬಸ್ ಗಳ ನವೀಕರಣ ಶುಲ್ಕವನ್ನು 3500 ರೂ. ಗಳಿಂದ 25000 ರೂ.ಗೆ ಹೆಚ್ಚಳ ಮಾಡಲಾಗಿದೆ.
