ರಾಮಭಕ್ತರಿಗೆ ಬಿಗ್ ಶಾಕ್ : ಬೆಂಗಳೂರು-ಅಯೋಧ್ಯೆ ವಿಮಾನ ಪ್ರಯಾಣ ದರ ಶೇ.400ರಷ್ಟು ಏರಿಕೆ

ಬೆಂಗಳೂರು : ಜನವರಿ 22 ರಂದು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಈ ಐತಿಹಾಸಿಕ ಕ್ಷಣವನ್ನು ತುಂಬಿಕೊಳ್ಳಲು ಇಡೀ ದೇಶವೇ ಸಜ್ಜಾಗಿದೆ.

ಇದೀಗ ಅಯೋಧ್ಯೆಗೆ ಹೊರಟ ಕನ್ನಡಿಗರಿಗೆ ಬಿಗ್ ಶಾಕ್ ಎದುರಾಗಿದ್ದು, ಬೆಂಗಳೂರು-ಅಯೋಧ್ಯೆ ವಿಮಾನ ದರ 400 % ರಷ್ಟು ಹೆಚ್ಚಳವಾಗಿದೆ.ಜನವರಿ 20 ರಂದು ಅಯೋಧ್ಯೆಗೆ ತೆರಳಲು ವಿಮಾನದ ಟಿಕೆಟ್ ಬುಕ್ ಮಾಡೋಕೆ ಹೊರಟರೆ ನೀವು ಶಾಕ್ ಆಗ್ತೀರಾ..! . ಏಕೆಂದರೆ, ಅತಿ ಕಡಿಮೆ ಟಿಕೆಟ್ ದರವೇ 24 ಸಾವಿರ ರೂ. ಇದೆ. ವಿಮಾನದಲ್ಲಿ ಅಯೋಧ್ಯೆ ತಲುಪುವುದಕ್ಕೆ 24 ಸಾವಿರ ರೂ. ಹಣ ನೀಡಬೇಕು. ಬೇರೆ ದಿನಕ್ಕೆ ಹೋಲಿಸಿದರೆ ಈಗಿನ ಟಿಕೆಟ್ ದರದಲ್ಲಿ 395% ಏರಿಕೆ ಕಂಡು ಬಂದಿದೆ.

ಜನವರಿ 20 ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1ಕ್ಕೆ ಹೊರಡಲಿರುವ ವಿಮಾನ ಅದೇ ದಿನ ರಾತ್ರಿ 11 ಗಂಟೆಗೆ ಅಯೋಧ್ಯೆ ತಲುಪಲಿದೆ. ನಡುವೆ 5 ಗಂಟೆಗಳ ಕಾಲ ಈ ವಿಮಾನ ಅಹಮದಾಬಾದ್ನಲ್ಲಿ ಇರಲಿದೆ. ಈ ವಿಮಾನದ ಟಿಕೆಟ್ ದರ 29,700 ರೂ. ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read