BIG NEWS : ಹೋಟೆಲ್ ಗ್ರಾಹಕರಿಗೆ ಬಿಗ್ ಶಾಕ್ : ಆ. 1 ರಿಂದ ಊಟ-ತಿಂಡಿ ದರ ಶೇ.10 ರಷ್ಟು ಹೆಚ್ಚಳ

ಬೆಂಗಳೂರು : ಆಗಸ್ಟ್ 1 ರಿಂದ ಹೋಟೆಲ್ ನ ತಿಂಡಿ ತಿನಿಸುಗಳ ಬೆಲೆ ಶೇ. 10 ಏರಿಕೆ ಮಾಡಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದು, ಈ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

ಹೌದು. ಶೇ. 10 ರಷ್ಟು ದರ ಹೆಚ್ಚಳ ಮಾಡುವ ಬಗ್ಗೆ ಹೋಟೆಲ್ ಮಾಲೀಕರ ಸಂಘದಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಅನ್ನಸಾಂಬಾರ್ 50 ರೂ. ನಿಂದ 60 ಕ್ಕೆ ಏರಿಸಲಾಗಿದೆ. ಫುಲ್ ಮೀಲ್ಸ್ ಬೆಲೆ 50 ರಿಂದ 70 ರೂ. ಏರಿಕೆ ಮಾಡಲಾಗಿದೆ.

ನಿರಂತರವಾಗಿ ಗ್ಯಾಸ್, , ಹಾಲು ತರಕಾರಿ ಬೆಲೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ತಿಂಡಿ ,ಊಟದ ಬೆಲೆಯಲ್ಲಿ ಏರಿಕೆ ಮಾಡಲು ತೀರ್ಮಾನ ಮಾಡಿದ್ದಾರೆ. ಕಾಫಿ ಹಾಗೂ ಟೀ ಬೆಲೆ 3 ರೂಪಾಯಿ ಹೆಚ್ಚಳವಾಗಲಿದೆ, ತಿಂಡಿ ತಿನಿಸುಗಳ ಬೆಲೆ 5ರಿಂದ 10 ರೂಪಾಯಿಗಳಷ್ಟು ಏರಿಕೆಯಾಗಲಿದೆ. ಊಟದ ದರ 10 ರೂಪಾಯಿ ಏರಿಕೆ ಆಗಲಿದೆ.

ಬಿಸಿ ಬೇಳೆಬಾತ್ 45 ರಿಂದ 55 ರೂ, ರೈಸ್ ಪೂರಿ 45 ರಿಂದ 50 ರೂ. ಮಸಾಲೆ ದೋಸೆ 60 ರೂ., ಉದ್ದಿನ ವಡೆ 15 ರೂ. ಪೂಳಿಯೊಗರೆ 40-50 ರೂ., ಇಡ್ಲಿ ವಡೆ 30 ರಿಂದ 50 ರೂ.ವರೆಗೆ, ಟಿ ಮತ್ತು ಕಾಫಿ 12 ರಿಂದ 15 ರೂ. ಬಾದಾಮಿ ಹಾಲು 18 ರೂಗೆ ಏರಿಕೆ ಮಾಡಲಾಗುವುದು ಎಂದು ಹೋಟೆಲ್ ಮಾಲೀಕರು ಮಾಹಿತಿ ನೀಡಿದ್ದಾರೆ.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದರ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಈಗಾಗಲೇ ವಿದ್ಯುತ್, ತರಕಾರಿ, ಅಕ್ಕಿ, ಬೇಳೆ ಕಾಳುಗಳ ಬೆಲೆಗಳು ಗಗನಕ್ಕೇರಿದ್ದು, ಹೊಟೇಲ್ ಉದ್ಯಮವನ್ನ ಸಂಕಷ್ಟಕ್ಕೆ ದೂಡಿದೆ ಇದರ ಜೊತೆ ವಿದ್ಯುತ್, ಹಾಲಿನ ದರ ಏರಿಕೆ ಬರೆ ಮಾಲೀಕರನ್ನ ಕಂಗೆಡಿಸಿದೆ.ಹೀಗಾಗಿ ನಷ್ಟ ಸರಿದೂಗಿಸಲು ಅನಿವಾರ್ಯವಾಗಿ ಆಗಸ್ಟ್ 1 ರಿಂದ ಹೋಟೆಲ್ ಊಟ, ತಿಂಡಿ, ಟೀ,ಕಾಫಿ ಬೆಲೆಯಲ್ಲಿ ಏರಿಕೆ ಮಾಡಲಾಗುತ್ತಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read