ಬೆಂಗಳೂರು : ಹೊಸ ವರ್ಷದಿಂದ ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ ಬೀಳಲಿದೆ. ಹೌದು, ಮುಂದಿನ ದಿನಗಳಲ್ಲಿ ಮೊಬೈಲ್ ರೀಚಾರ್ಜ್ ದರ ಭಾರಿ ಏರಿಕೆಯಾಗಲಿದೆ. ಇತ್ತೀಚೆಷ್ಟೇ ಜಿಯೋ ಬಿಟ್ಟು ಎಲ್ಲಾ ಕಂಪನಿಗಳು ತಮ್ಮ ಯೋಜನೆಗಳ ಬೆಲೆ ಹೆಚ್ಚಿಸಿದೆ. ಆದರೆ ಈಗ ಅವುಗಳ ಬೆಲೆ ಮತ್ತೆ ಏರಿಕೆಯಾಗಲಿದೆ ಎನ್ನಲಾಗಿದೆ.
ಮುಂದಿನ ವಾರದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್, ಜಿಯೋ, ಏರ್ ಟೆಲ್, ವೊಡಾಫೋನ್ ಐಡಿಯಾ ತನ್ನ ರೀಚಾರ್ಜ್ ದರಗಳನ್ನ ಹೆಚ್ಚಿಸಲಿದೆ. ಇನ್ಮುಂದೆ ನೀವು ರೀಚಾರ್ಜ್ ಗೆ ಹೆಚ್ಚು ಹಣ ವ್ಯಯಿಸಬೇಕಾದೀತು.
ಕಳೆದ ಕೆಲವು ತಿಂಗಳಿಂದ ಟೆಲಿಕಾಂ ಕಂಪನಿಗಳ ಆದಾಯದಲ್ಲಿ ತೀವ್ರ ಇಳಿಕೆ ಕಂಡುಬರುತ್ತಿದೆ.
ಕಂಪನಿಗಳ ಆದಾಯ ಬೆಳವಣಿಗೆಯು ಹಿಂದಿನ ನಾಲ್ಕು ತ್ರೈಮಾಸಿಕಗಳಲ್ಲಿ ಇದ್ದ ಶೇ. 14-16 ರಿಂದ ಶೇ. 10ಕ್ಕೆ ಕುಸಿದಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಈ ಇಳಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈ ಆದಾಯ ಕುಸಿತವನ್ನು ಸರಿದೂಗಿಸಲು ಮತ್ತು ಲಾಭವನ್ನು ಹೆಚ್ಚಿಸಲು ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಕಂಪನಿಗಳು ಹೇಳಿದೆ. ಟೆಲಿಕಾಂ ಸುಂಕಗಳು ಶೇಕಡಾ 15 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದಾರೆ.
