ಬೆಂಗಳೂರು: ತಂದೆ, ತಾಯಿಗೆ ಮಕ್ಕಳು ನೀಡಬೇಕಾದ ಜೀವನಾಂಶ ಮೊತ್ತ ಹೆಚ್ಚಳಕ್ಕೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಶಿಫಾರಸು ಮಾಡಿದೆ.
2007ರ ಪೋಷಕರ ಕಲ್ಯಾಣ ಕಾಯ್ದೆಯ ತಿದ್ದುಪಡಿಗೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಶಿಫಾರಸು ಮಾಡಿದೆ. 2007ರ ಪೋಷಕರ ಕಲ್ಯಾಣ ಕಾಯ್ದೆಯ ಸೆ. 9ರ ಪರಿಶೀಲನೆ ಅಗತ್ಯವೆಂದು ಹೇಳಲಾಗಿದೆ. ಮಕ್ಕಳು ನೀಡಬೇಕಾದ ಗರಿಷ್ಠ ಜೀವನಾಂಶದ ಮಿತಿ 10 ಸಾವಿರ ರೂ. ಇದೆ. 2007ರ ಜೀವನ ನಿರ್ವಹಣಾ ವೆಚ್ಚಕ್ಕೂ 2025ಕ್ಕೂ ವ್ಯತ್ಯಾಸವಿದೆ. ಹಣದುಬ್ಬರವನ್ನು ಪರಿಗಣಿಸಿ ಜೀವನಾಂಶ ಗರಿಷ್ಠ ಮೊತ್ತ ಮಿತಿ ಹೆಚ್ಚಳ ಮಾಡಬೇಕು ಎಂದು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.
ಜೀವನಾಂಶ ವಿಧಿಸಲು 2007ರ ಪೋಷಕರ ಕಲ್ಯಾಣ ಕಾಯ್ದೆಯಲ್ಲಿ ಅವಕಾಶವಿದೆ. ತಂದೆ, ತಾಯಿ ಯೋಗ ಕ್ಷೇಮ ನಿರ್ಲಕ್ಷಿಸುವ ಮಕ್ಕಳಿಗೆ ಜೀವನಾಂಶ ವಿಧಿಸಲಾಗುವುದು.