ಖರೀದಿದಾರರಿಗೆ ಬಿಗ್ ಶಾಕ್: ಮತ್ತೆ ಗಗನಕ್ಕೇರಿದ ಚಿನ್ನ, ಬೆಳ್ಳಿ ದರ

ನವದೆಹಲಿ: ದೆಹಲಿ ಚಿನಿವಾರ ಪೇಟೆಯಲ್ಲಿ ಬುಧವಾರ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 1000 ರೂ. ಏರಿಕೆಯಾಗಿದ್ದು, 1,08,200 ರೂಪಾಯಿಗೆ ತಲುಪಿದೆ.

ಬೆಂಗಳೂರಿನಲ್ಲಿ ಬುಧವಾರ ಬೆಳ್ಳಿ ದರ ಕೆಜಿಗೆ 1000 ರೂಪಾಯಿ ಏರಿಕೆಯಾಗಿದ್ದು, 1,11,000 ರೂ.ಗೆ ತಲುಪಿದೆ.

ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 540 ರೂ.ಗೆ ಏರಿಕೆಯಾಗಿದ್ದು, 1,00,710 ರೂಪಾಯಿಗೆ ಮಾರಾಟವಾಗಿದೆ. 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 500 ರೂಪಾಯಿ ಹೆಚ್ಚಳವಾಗಿದ್ದು, 99,950 ರೂಪಾಯಿಗೆ ತಲುಪಿದೆ.

ಬೆಂಗಳೂರಿನಲ್ಲಿ 10 ಗ್ರಾಂ ಶುದ್ಧ ಅಪರಂಜಿ ಚಿನ್ನದ ದರ 540 ರೂಪಾಯಿ ಏರಿಕೆಯಾಗಿದ್ದು, 1,00,910 ರೂ.ಗೆ ತಲುಪಿದೆ. 10 ಗ್ರಾಂ ಆಭರಣ ಚಿನ್ನದ ದರ 500 ರೂ. ಏರಿಕೆ ಕಂಡಿದ್ದು, 92 500 ರೂಪಾಯಿಗೆ ತಲುಪಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read