ನವದೆಹಲಿ : ‘ಮುಡಾ’ ಕೇಸ್ ನಲ್ಲಿ ಸಿಎಂ ಪತ್ನಿ ಪಾರ್ವತಿ, ಸಚಿವ ಭೈರತಿ ಸುರೇಶ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಸುಪ್ರೀಂಕೋರ್ಟ್ ನಲ್ಲಿ ಇಡಿ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ. ರಾಜಕೀಯವನ್ನು ಸುಪ್ರೀಂಕೋರ್ಟ್ ಗೆ ತರಬೇಡಿ ಎಂದು ತರಾಟೆಗೆ ತೆಗೆದುಕೊಂಡಿದೆ.
ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಇಡಿ ಅಧಿಕಾರಿಗಳ ಅರ್ಜಿ ವಜಾಗೊಳಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿಗೆ 14 ಸೈಟ್ ಹಂಚಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ರಾಜಕೀಯ ಹೋರಾಟ ಚುನಾವಣಾ ಕಣದಲ್ಲಿರಲಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಕೋರ್ಟ್ ಗರಂ ಆಗಿದೆ.ರಾಜಕೀಯವನ್ನು ಸುಪ್ರೀಂಕೋರ್ಟ್ ಗೆ ತರಬೇಡಿ ಎಂದು ತರಾಟೆಗೆ ತೆಗೆದುಕೊಂಡಿದೆ.
ಇಡಿಯನ್ನು ರಾಜಕೀಯ ಹೋರಾಟಕ್ಕೆ ಬಳಸಬಾರದು. ಇಡಿ ಬಗ್ಗೆ ಕೆಲ ಕಠಿಣ ಟೀಕೆಗಳನ್ನು ಮಾಡಬೇಕಾಗುತ್ತದೆ. ಮತದಾರರ ಮುಂದೆ ರಾಜಕೀಯ ಹೋರಾಟ ಮಾಡಿ. ನಮ್ಮ ಬಾಯಿ ತೆರೆಯುವ ಹಾಗೆ ಮಾಡಬೇಡಿ, ನನ್ನ ಬಾಯಿ ತೆರೆಯುವ ಹಾಗೆ ಮಾಡಿದರೆ ಇನ್ನಷ್ಟು ಟೀಕೆಗಳನ್ನ ಇಡಿ ವಿರುದ್ಧ ಮಾಡಲಾಗುತ್ತದೆ ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶರು ಹೇಳಿದ್ದಾರೆ.
The Supreme Court has dismissed a plea filed by the Directorate of Enforcement (ED) challenging the Karnataka High Court’s decision to set aside the probe against B.M. Parvathi, the wife of Karnataka CM Siddaramaiah, in connection with the alleged irregularities with regard to…
— ANI (@ANI) July 21, 2025