ಬೆಂಗಳೂರು : ನಟ ಧ್ರುವ ಸರ್ಜಾಗೆ ಬಿಗ್ ರಿಲೀಫ್ ಸಿಕ್ಕಿದ್ದು, ಚಾರ್ಜ್ ಶೀಟ್ ಸಲ್ಲಿಸದಂತೆ ಪೊಲೀಸರಿಗೆ ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಏನಿದು ಕೇಸ್..?
ನಟ ಧ್ರುವ ಸರ್ಜಾ ವಿರುದ್ಧ 3.15 ಕೋಟಿ ವಂಚನೆ ಆರೋಪ ಹಿನ್ನೆಲೆಯಲ್ಲಿ ಮುಂಬೈ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದ ಧ್ರುವ ಸರ್ಜಾ ಮ್ಯಾನೇಜರ್, ಇದೊಂದು ಸುಳ್ಳು ಆರೋಪ ಎಂದಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್, ಧ್ರುವ ಸರ್ಜಾ ವಿರುದ್ಧ ಮೂರು ಕೋಟಿ ವಂಚನೆ ಆರೋಪ ಸುಳ್ಳು. ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ. ನಾವು ಸಿನಿಮಾ ಮಾಡಲು ರೆಡಿ ಇದ್ದೆವು. ಆದರೇ ಅವರೇ ವಿಳಂಬ ಮಾಡುತ್ತಿದ್ದಾರೆ ಎಂದಿದ್ದಾರೆ.
2018ರಲ್ಲಿ ಸೋಲ್ಜರ್ ಸಿನಿಮಾ ಮಾಡಲು 3.15 ಕೋಟಿ ರೂಪಾಯಿ ಹಣ ನೀಡಿದ್ದರು. ನಂದಿನಿ ಎಂಟ್ರಟೈನ್ ಮೆಂಟ್ ನಿಂದ 20 ಲಕ್ಷ ರೂಪಾಯಿ ಹಾಗೂ ರಾಘವೇಂದ್ರ ಹೆಗ್ಡೆ ಕಡೆಯಿಂದ 2.95 ಲಕ್ಷ ರೂಪಾಯಿ ಬಂದಿತ್ತು. ನಂದಿನಿ ಸಂಸ್ಥೆ ಹಾಗೂ ರಾಘವೇಂದ್ರ ಹೆಗ್ಡೆ ಅವರಿಗೆ ಏನೋ ಸಮಸ್ಯೆಯಾಗಿದ್ದರಿಂದ 20 ಲಕ್ಷ ರೂಪಾಯಿ ಹಣವನ್ನು ನಾವು ಹಿಂದಿರುಗಿಸಿದ್ದೆವು. ಉಳಿದ ಹಣಕ್ಕೆ ಒಂದು ಸಿನಿಮಾ ಮಾಡಬೇಕಿತ್ತು. ಇದಕ್ಕಾಗಿ ಅವರು 3 ತಿಂಗಳು ಅವಕಾಶ ಕೇಳಿದ್ದರು. ಪ್ರತಿ ಬಾರಿ ನಾವು ಕರೆ ಮಾಡಿ ಕೇಳಿದಾಗಲೂ ಅವರು ಬ್ಯುಸಿ ಇರುವುದಾಗಿ ಹೇಳುತ್ತಲೇ ಬಂದಿದ್ದಾರೆ ಎಂದು ತಿಳಿಸಿದ್ದರು.
ನಾಲ್ಕುವರೆ ವರ್ಷದ ಬಳಿಕ ಸಿನಿಮಾ ಸ್ಕ್ರಿಪ್ಟ್ ಮೊದಲಾರ್ಧವನ್ನು ಕಳುಹಿಸಿದರು. ದ್ವಿತೀಯಾರ್ಧ ಇನ್ನೂ ಬಂದಿಲ್ಲ. ನಾವು ಅವರ ಜೊತೆ ನಿರಂತರವಾಗಿ ಮಾತುಕತೆ ನಡೆಸುತ್ತಲೇ ಇದ್ದೇವು. ಒಂದು ದಿನ ಬಂದು ಸೋಲ್ಜರ್ ಸಿನಿಮಾ ಮಾಡೋದು ಬೇಡ. ಬಜೆಟ್ ಜಾಸ್ತಿಯಾಗುತ್ತೆ. ಮಾಡಿದರೂ ಕನ್ನಡದಲ್ಲಿ ಬೇಡ ತೆಲುಗು ಅಥವಾ ಹಿಂದಿಯಲ್ಲಿ ಮಾಡೋಣ ಎಂದರು. ಅದಕ್ಕೆ ಧ್ರುವ ಒಪ್ಪಲಿಲ್ಲ. ಕನ್ನಡದಲ್ಲೇ ಮಾಡಬೇಕು ಎಂದು ಹೇಳಿದರು. ಜೂನ್ ೨೮ರಂದು ಭೇಟಿಯಾದಾಗ ರಾಘವೇಂದ್ರ ಅವರು ತೆಲುಗು ಅಥವಾ ಹಿಂದಿಯಲ್ಲೇ ಸಿನಿಮಾ ಮಾಡೋಣ ಎಂದು ಮತ್ತೆ ಹೇಳಿದರು. ಧ್ರುವ ಕನ್ನಡದಲ್ಲೇ ಮಾಡಬೇಕು ಎಂದು ಪಟ್ಟು ಹಿಡಿದರು. ಕೊನೆಗೆ ಕನ್ನಡದಲ್ಲೇ ಸಿನಿಮಾ ಮಾಡೋದು ಎಂಬ ತೀರ್ಮಾನವಾಯಿತು. ಅಕ್ಟೋಬರ್ ನಿಂದ ಡೇಟ್ಸ್ ಬೇಕು ಎಂದು ರಾಘವೇಂದ್ರ ಕೇಳಿದ್ದರು. ಅದಕ್ಕೆ ನಾವು ಒಪ್ಪಿದ್ದೆವು. ಜುಲೈನಲ್ಲಿ ನೋಟಿಸ್ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.ನಾವು ಪ್ರತಿ ಬಾರಿ ಕರೆ ಮಾಡಿ ನಾವು ರೆಡಿ ಇದ್ದೇವೆ ಎಂದು ಹೇಳುತ್ತಲೇ ಇದ್ದೆವು. ಅವರೇ ವಿಳಂಬ ಮಾಡುತ್ತಿದ್ದರು. ನಮ್ಮ ಬಳಿ ಒಂದು ಮಾತು. ಅಲ್ಲಿ ಮತ್ತೊಂದು ರೀತಿ ಹೇಲುತ್ತಿದ್ದರು. ಬಳಿಕ ಕರೆ ಮಾಡಿದರೆ ಕೋರ್ಟ್ ಗೆ ಹೋಗಿದ್ದಾರೆ ಎಲ್ಲವೂ ಕೋರ್ಟ್ ನಲ್ಲೇ ಇತ್ಯರ್ಥವಾಗಲಿದೆ ಎಂದು ಹೇಳಿದ್ದರು.