Video: ‘ಯುವಿ’ ದಾಖಲೆಯನ್ನು ಪುಡಿಗಟ್ಟಿದ ಯುವ ಕ್ರಿಕೆಟಿಗ; ಒಂದೇ ಓವರ್‌ನಲ್ಲಿ 39 ರನ್‌ ಬಾರಿಸಿ ಹೊಸ ರೆಕಾರ್ಡ್‌…!

ಟಿ-20 ಪಂದ್ಯದ ಒಂದೇ ಓವರ್‌ನಲ್ಲಿ 36 ರನ್‌ ಬಾರಿಸಿದ್ದ ಯುವರಾಜ್‌ ಸಿಂಗ್‌ ದಾಖಲೆಯನ್ನು ಸಮೋವಾನ ಆಟಗಾರ ಡೇರಿಯಸ್ ವಿಸ್ಸರ್ ಮುರಿದಿದ್ದಾರೆ. ಅಪಿಯಾದ ಗಾರ್ಡನ್‌ ಓವಲ್‌ ನಂ.2ನಲ್ಲಿ ನಡೆಯುತ್ತಿರುವ ICC ಪುರುಷರ T20 ವಿಶ್ವಕಪ್ ಉಪ ಪ್ರಾದೇಶಿಕ ಪೂರ್ವ ಏಷ್ಯಾ-ಪೆಸಿಫಿಕ್ ಕ್ವಾಲಿಫೈಯಿಂಗ್‌ ಪಂದ್ಯದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ವೇಗದ ಬೌಲರ್‌ ನಲಿನ್ ನಿಪಿಕೊ ಓವರ್‌ನಲ್ಲಿ ಡೇರಿಯಸ್‌ ವಿಸ್ಸರ್‌ 39 ರನ್ ಗಳಿಸಿದ್ದಾರೆ.

ಡೇರಿಯಸ್‌ ವಿಸ್ಸರ್‌ ಒಟ್ಟು 6 ಸಿಕ್ಸರ್‌ ಸಿಡಿಸಿದರು. ನಿಪಿಕೋ ಮಾಡಿದ ನೋಬಾಲ್‌ ಮತ್ತಷ್ಟು ರನ್‌ಗಳ ಮಳೆಗೆ ಕಾರಣವಾಯ್ತು. ಸತತ ಮೂರು ಸಿಕ್ಸರ್‌ಗಳ ಬಳಿಕ ನಾಲ್ಕನೇ ಎಸೆತದಲ್ಲಿ ಒಂದು ಬೌಂಡರಿ ಗಳಿಸಿದ್ರು. ಓವರ್‌ನಲ್ಲಿ ಒಂದು ಡಾಟ್‌ ಬಾಲ್‌ ಕೂಡ ಇತ್ತು. ಆದರೆ 3 ನೋ ಬಾಲ್‌ಗಳನ್ನು ಎಸೆದಿದ್ದರಿಂದ ಬರೋಬ್ಬರಿ 39 ರನ್‌ಗಳನ್ನು ಖರ್ಚು ಮಾಡಬೇಕಾಯ್ತು.

ಇದರೊಂದಿಗೆ ಡೇರಿಯಸ್ ಭರ್ಜರಿ ಶತಕ ಕೂಡ ಗಳಿಸಿದ್ರು. ಟಿ20ಯಲ್ಲಿ 14 ಸಿಕ್ಸರ್‌ ಬಾರಿಸಿದ ದಾಖಲೆಯನ್ನೂ ಮಾಡಿದ್ರು. ಡೇರಿಯಸ್‌ 62 ಬಾಲ್‌ಗಳಲ್ಲಿ 132 ರನ್‌ ಬಾರಿಸಿದ್ದಾರೆ. 2007ರ ಟಿ-20 ವಿಶ್ವಕಪ್‌ ಪಂದ್ಯದಲ್ಲಿ ಯುವರಾಜ್‌ ಸಿಂಗ್‌, ಇಂಗ್ಲೆಂಡ್‌ನ ಸ್ಟುವರ್ಟ್‌ ಬ್ರಾಡ್‌ ಬೌಲಿಂಗ್‌ನಲ್ಲಿ ಒಂದೇ ಓವರ್ನಲ್ಲಿ 36 ರನ್‌ ಗಳಿಸಿದ್ದರು. ಈ ದಾಖಲೆ ಈಗ ಧೂಳೀಪಟವಾಗಿದೆ.

https://twitter.com/SportzOnX/status/1825752189710774526?ref_src=twsrc%5Etfw%7Ctwcamp%5Etweetembed%7Ctwterm%5E1825747701633528193%7Ctwgr%5E0c731a3c5333cfc25c04ad4d24424dac64287d59%7Ctwcon%5Es1_&ref_url=https%3A%2F%2Ftimesofindia.indiatimes.com%2Fsports%2Fcricket%2Fnews%2Fyuvraj-singhs-record-broken-samoas-darius-visser-hits-39-runs-in-an-over%2Farticleshow%2F112641175.cms

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read