ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿಧಿಗೆ 11 ತಿಂಗಳಲ್ಲಿ 918 ಕೋಟಿ ರೂಪಾಯಿ ದೇಣಿಗೆ ಸಲ್ಲಿಕೆಯಾಗಿದೆ.
ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಮಾಹಿತಿ ನೀಡಿ, 2024ರ ನವೆಂಬರ್ ನಿಂದ 2025 ರ ಅಕ್ಟೋಬರ್ ವೇಳೆಗೆ ಆನ್ಲೈನ್ ಮೂಲಕ 579.38 ಕೋಟಿ ರೂ., ಆಫ್ ಲೈನ್ ಮೂಲಕ 339.20 ಕೋಟಿ ರೂ. ಹಣವನ್ನು ಭಕ್ತರು ದೇಣಿಗೆ ರೂಪದಲ್ಲಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಅನ್ನದಾಸೋಹ ಟ್ರಸ್ಟಿಗೆ ಅತಿ ಹೆಚ್ಚು 339 ಕೋಟಿ ರೂ., ಶ್ರೀವಾರಿ ಟ್ರಸ್ಟ್ ಗೆ 252 ಕೋಟಿ ರೂ., ಶ್ರೀ ಬಾಲಾಜಿ ಆರೋಗ್ಯ ವರಪ್ರಸಾದಿನಿ ಟ್ರಸ್ಟಿಗೆ 98 ಕೋಟಿ ರೂಪಾಯಿ ಸೇರಿ ವಿವಿಧೆಡೆ ದೇಣಿಗೆ ನೀಡಲಾಗಿದೆ.
ತಿರುಪತಿ ದೇವಾಲಯದ ಒಟ್ಟು ಆಸ್ತಿ ಅಂದಾಜು 2.5 ಲಕ್ಷ ಕೋಟಿ ರೂ.ಗೂ ಹೆಚ್ಚಾಗಿದೆ. ಇದರಲ್ಲಿ ವಿವಿಧ ಬ್ಯಾಂಕುಗಳಲ್ಲಿ 18,817 ಕೋಟಿ ರೂ. ಠೇವಣಿ ಇಡಲಾಗಿದೆ. 10.25 ಟನ್ ಚಿನ್ನ, 2.5 ಟನ್ ಚಿನ್ನದ ಆಭರಣ, 7123 ಎಕರೆ ಭೂಮಿ, 960 ಇತರೆ ಆಸ್ತಿಗಳಿವೆ. ದೇವಾಲಯದ ವಾರ್ಷಿಕ ಆದಾಯ 4300 ಕೋಟಿ ರೂ.ಗೂ ಹೆಚ್ಚಾಗಿದೆ ಎಂದು ಹೇಳಲಾಗಿದೆ.
