ನವದೆಹಲಿ: ಸಂತ್ರಸ್ತೆ ಮದುವೆಯಾಗಿ ಒಂದು ವರ್ಷದ ಮಗುವಿನೊಂದಿಗೆ ಸುಖ ಜೀವನ ನಡೆಸುತ್ತಿರುವ ಪತಿ ವಿರುದ್ಧದ ಪೋಕ್ಸೊ ಪ್ರಕರಣವವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.
ಆರೋಪಿ ಮತ್ತು ಸಂತ್ರಸ್ತೆ ನಡುವಿನ ಸಂಬಂಧಕ್ಕೆ ಪರಸ್ಪರ ಸಮ್ಮತಿ ಇತ್ತು. ಅವರಿಬ್ಬರ ನಡುವೆ ಕಾಮದ ಕಾರಣವಲ್ಲದೆ ಪ್ರೇಮವೂ ಇತ್ತು. ಹಾಗಾಗಿ ಇದು ಅಪರಾಧ ಎನ್ನಲು ಆಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎ.ಜಿ. ಮಸೀಹ್ ಅವರಿದ್ದ ನ್ಯಾಯಪೀಠ ಹೇಳಿದೆ.
ಈಗ ಪತ್ನಿಯಾಗಿರುವ ಯುವತಿ, ಪತಿಯ ಜೊತೆಗೆ ಸಂಸಾರ ನಡೆಸುತ್ತಿದ್ದೇನೆ. ಅವರೊಂದಿಗೆ ಸಂತೃಪ್ತ ಮತ್ತು ಸೌಹಾರ್ದ ಜೀವನ ನಡೆಸುತ್ತಿದ್ದು, ಪ್ರಕರಣ ಕೈ ಬಿಟ್ಟು ದಾಂಪತ್ಯ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಸುಪ್ರೀಂ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿ ಮನವಿ ಮಾಡಿದ್ದರು.
ಆಕೆ ಅಪ್ರಾಪ್ತಳಾಗಿದ್ದಾಗ ಇಬ್ಬರು ಒಟ್ಟಿಗೆ ಮನೆ ಬಿಟ್ಟು ಓಡಿ ಹೋಗಿದ್ದರು. ಆತ ಲೈಂಗಿಕ ಸಂಪರ್ಕ ಬೆಳೆಸಿದ್ದ. ವಿಚಾರಣೆ ನಡೆಸಿದ ಮದ್ರಾಸ್ ಸೈಕೋರ್ಟ್ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ತೀರ್ಪು ಬರುವ ಮೊದಲೇ ಇಬ್ಬರೂ ಮದುವೆಯಾಗಿದ್ದರು. ಶಿಕ್ಷೆ ರದ್ದು ಕೋರಿ ಪತಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೋಕ್ಸೊ ಕೇಸ್ ನಿಂದ ಪತಿಯನ್ನು ಖುಲಾಸೆಗೊಳಿಸಿದೆ.
