ಬೆಂಗಳೂರು: ಯುಜಿಸಿ ಪಠ್ಯಕ್ರಮಕ್ಕೆ ರಾಜ್ಯ ಸರ್ಕಾರದಿಂದಲೂ ವಿರೋಧ ವ್ಯಕ್ತವಾಗಿದೆ. ಕೇರಳದ ಬಳಿಕ ರಾಜ್ಯದಲ್ಲಿಯೂ ಯುಜಿಸಿ ಪಠ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ.
ಪಠ್ಯಕ್ರಮ ರಚನೆಯಲ್ಲಿ ಯುಜಿಸಿ ಮೂಗು ತೂರಿಸುತ್ತಿದೆ ಎಂದು ಆರೋಪಿಸಲಾಗಿದೆ. ಯುಜಿಸಿ ಪಠ್ಯಕ್ರಮ ಒಪ್ಪುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದ್ದು, ಯುಜಿಸಿಗೆ ಪಠ್ಯಕ್ರಮ ರೂಪಿಸುವ ಹಕ್ಕಿಲ್ಲ ಎಂದು ತಿಳಿಸಿದ್ದಾರೆ.
ಯುಜಿಸಿ ಕೇವಲ ಪಠ್ಯ ಕ್ರಮದ ಚೌಕಟ್ಟನ್ನು ಮಾತ್ರ ನೀಡಬೇಕು. ಹೀಗಾಗಿ ಯುಜಿಸಿ ಕರಡು ಪ್ರತಿಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಯುಜಿಸಿ ಒಂದು ನಿಯಂತ್ರಣ ಸಂಸ್ಥೆ ಅಷ್ಟೇ. ಪಠ್ಯ ರೂಪಿಸಲು ಅಧಿಕಾರ ಹೊಂದಿಲ್ಲ. ಪಠ್ಯಕ್ರಮ ರೂಪಿಸುವ ಅಧಿಕಾರ ವಿವಿ ಅಧ್ಯಯನ ಮಂಡಳಿಗೆ ಇದೆ. ಯುಜಿಸಿ ಪಠ್ಯಕ್ರಮ ರೂಪಿಸಲು ಅಧ್ಯಯನ ಮಾಡಲು ಸಮಿತಿ ರಚಿಸಲಾಗಿದೆ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಹೇಳಿದ್ದಾರೆ.