BIG NEWS : 2025-26ನೇ ಸಾಲಿನ ಆರೋಗ್ಯ ಇಲಾಖೆ ವೈದ್ಯರು, ಸಿಬ್ಬಂದಿಗಳ ವರ್ಗಾವಣೆ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ ಕಾಯ್ದೆ 2011 ಹಾಗೂ ಕಾಲ ಕಾಲಕ್ಕೆ ಆದ ತಿದ್ದುಪಡಿ ನಿಯಮಗಳಂತೆ 2025-26ನೇ ಸಾಲಿನ ವರ್ಗಾವಣೆಯನ್ನು ವರ್ಗಾವಣೆ ಕೈಗೊಳ್ಳಲು ಬಿ.ಸಿ&ಡಿ ವೃಂದದ ಅಧಿಕಾರಿ ಮತ್ತು ನೌಕರರ ಅಗತ್ಯ ಮಾಹಿತಿ ಸಲ್ಲಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ.

ಏನಿದೆ ಸುತ್ತೋಲೆಯಲ್ಲಿ..?

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ ಕಾಯ್ದೆ 2011 ಹಾಗೂ ಕಾಲ ಕಾಲಕ್ಕೆ ಆದ ತಿದ್ದುಪಡಿ ನಿಯಮಗಳಂತೆ 2025-26ನೇ ಸಾಲಿನ ವರ್ಗಾವಣೆಯನ್ನು ವರ್ಗಾವಣೆ ಕೈಗೊಳ್ಳಲು ಬಿ.ಸಿ&ಡಿ ವೃಂದದ ಅಧಿಕಾರಿ ಮತ್ತು ನೌಕರರ ಅಗತ್ಯ ಮಾಹಿತಿ ಸಲ್ಲಿಸುವ ಬಗ್ಗೆ
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿ ಮತ್ತು ನೌಕರರುಗಳ ವರ್ಗಾವಣೆಯನ್ನು ಕರ್ನಾಟಕ ರಾಜ್ಯ ನಾಗರೀಕ ಸೇವಾ (ವೈದ್ಯಾಧಿಕಾರಿಗಳ ಹಾಗೂ ಇತರೆ ಸಿಬ್ಬಂದಿಯ ವರ್ಗಾವಣೆ) ಕಾಯ್ದೆ 2011 ಹಾಗೂ ಕಾಲಕಾಲಕ್ಕೆ ಹೊರಡಿಸಲಾದ ತಿದ್ದುಪಡಿ ಕಾಯ್ದೆಯಡಿ ರಚಿಸಲಾಗಿರುವ ಸಮಾಲೋಚನಾ ನಿಯಮಗಳನ್ವಯ ಆಯಾ ವರ್ಷದ ಎಪ್ರಿಲ್ ಮತ್ತು ಮೇ ಮಾಹೆಯಲ್ಲಿ ನಡೆಸಬೇಕಾಗಿರುತ್ತದೆ.
ಅದರಂತೆ 2025-26ನೇ ಸಾಲಿನಲ್ಲಿ ಸಾರ್ವಜನಿಕ ಹಿತದೃಷ್ಟಿಯ ವರ್ಗಾವಣೆ ನಡೆಸಲು ವರ್ಗಾವಣೆ ಕಾಯ್ದೆ ಮತ್ತು ನಿಯಮ 6 ರಲ್ಲಿ ನಿಗದಿಪಡಿಸಿರುವ ಕನಿಷ್ಠ ಸೇವಾವಧಿಯನ್ನು ದಿನಾಂಕ 31-03-2025 ರ ಅಂತಿಮ ದಿನಾಂಕಕ್ಕೆ ಲೆಕ್ಕಹಾಕಿದಾಗ ಪೂರೈಸಿರುವ ವೃಂದ ಬಿ.ಸಿ & ಡಿ ಅಧಿಕಾರಿಗಳ/ಸಿಬ್ಬಂದಿಗಳ ಮಾಹಿತಿಯನ್ನು ಇದರೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿರುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು/ಶಸ್ತ್ರ ಚಿಕಿತ್ಸಕರುಗಳು/ನಿಯಂತ್ರಣಾಧಿಕಾರಿಗಳು ತಮ್ಮ ಜಿಲ್ಲೆ/ವ್ಯಾಪ್ತಿಯಲ್ಲಿನ ಅಧಿಕಾರಿ/ನೌಕರರ ಎಲ್ಲಾ ವೃಂದವಾರು ಹುದ್ದೆಗಳ ಮಾಹಿತಿಯನ್ನು ತಮ್ಮ ಹಂತದಲ್ಲಿ ಹುದ್ದೆವಾರು ಪ್ರತ್ಯೇಕವಾಗಿ ವರ್ಗಾವಣೆ ಕಾಯ್ದೆ ಮತ್ತು ನಿಯಮ-2011 ರನ್ವಯ ಪರಿಶೀಲಿಸಿ ಕ್ರೂಢೀಕರಿಸಿ 10 ದಿನಗಳೊಳಗಾಗಿ ಅದರ ಸಾಪ್ಟ್ ಕಾಫಿ ಹಾಗೂ ಹಾರ್ಡ್ ಕಾಫಿಯನ್ನು ಮಾಹಿತಿಗಳನ್ನು ಸಲ್ಲಿಸುವುದು, ತಪ್ಪಿದಲ್ಲಿ, ಮಾಹಿತಿ ಸಲ್ಲಿಸದಿರುವ ಹಾಗೂ ತಪ್ಪಾದ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರುಗಳು/ನಿಯಂತ್ರಣಾಧಿಕಾರಿರವರುಗಳನ್ನೇ ನೇರ ಹೊಣೆಗಾರರನ್ನಾಗಿಸಲಾಗುವುದು. ಇದನ್ನು ಅತೀ ಜರೂರೆಂದು ಭಾವಿಸುವುದು. (ಆಯುಕ್ತಾಲಯದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳ ವಿಷಯ ನಿರ್ವಹಿಸುವ ಸಂಕಲನಗಳಿಗೆ ಸಂಬಂಧಪಟ್ಟ ಸಿಬ್ಬಂದಿಗಳು ವರ್ಗಾವಣೆಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಬಂಧಪಟ್ಟ ಸಂಸ್ಥೆಗಳಿಂದ ಕ್ರೋಢೀಕರಿಸುವುದು ) ಎಂದು ಸೂಚಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read