BIG NEWS : ನಾಳೆ, ನಾಡಿದ್ದು ಸಿಎಂ ಸಿದ್ದರಾಮಯ್ಯ ಬಳ್ಳಾರಿ-ವಿಜಯನಗರ ಜಿಲ್ಲಾ ಪ್ರವಾಸ ; ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಬಳ್ಳಾರಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂ.20, 21 ರಂದು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಜೂ.20 ರಂದು ಸಂಜೆ 04 ಗಂಟೆಗೆ ಬೆಂಗಳೂರಿನ ಹೆಚ್ಎಎಲ್ ನ ವಿಮಾನ ನಿಲ್ದಾಣದಿಂದ (ವಿಶೇಷ ವಿಮಾನದ ಮೂಲಕ) ನಿರ್ಗಮಿಸಿ ಸಂಜೆ 04.50 ಕ್ಕೆ ತೋರಣಗಲ್ ನ ಜಿಂದಾಲ್ ನ ಏರ್ ಸ್ಟ್ರಿಪ್ ಗೆ ಆಗಮಿಸುವರು.
ನಂತರ ಸಂಜೆ 06.30 ಗಂಟೆಗೆ ತೋರಣಗಲ್ ನ ವಿದ್ಯಾನಗರದ ಜೆಎಸ್ಡಬ್ಲ್ಯೂ ಟೌನ್ ಶಿಪ್ ನಲ್ಲಿ ಏರ್ಪಡಿಸಿರುವ “ಯೋಗರತ್ನ” ಪ್ರಶಸ್ತಿ-2024 ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಬಳಿಕ ಜಿಂದಾಲ್ ನಲ್ಲಿ ವಾಸ್ತವ್ಯ ಮಾಡುವರು.

ಜೂ.21 ರಂದು ಬೆಳಿಗ್ಗೆ 07 ಗಂಟೆಗೆ ತೋರಣಗಲ್ನ ವಿದ್ಯಾನಗರದ ಜೆಎಸ್ಡಬ್ಲ್ಯೂ ಟೌನ್ ಶಿಪ್ ನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಏರ್ಪಡಿಸಿರುವ ‘ಯೋಗ’ ಕಾರ್ಯಕ್ರಮದಲ್ಲಿ ಭಾಗವಹಿಸುವರು.ಬಳಿಕಬೆಳಿಗ್ಗೆ 10 ಗಂಟೆಗೆ ತೋರಣಗಲ್ನ ವಿದ್ಯಾನಗರದಿಂದ ಹೊರಟು 10.25 ಕ್ಕೆ ವಿಜಯನಗರ ಜಿಲ್ಲೆಯ ಹೊಸಪೇಟೆಗೆ ಆಗಮಿಸುವರು. ನಂತರ 11 ಗಂಟೆಗೆ ಹೊಸಪೇಟೆಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿರುವ ವಿಜಯನಗರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸುವರು.

ಸಂಜೆ 04 ಗಂಟೆಗೆ ಹೊಸಪೇಟೆಯಿಂದ ಹೊರಟು, 04.25 ಕ್ಕೆ ತೋರಣಗಲ್ನ ಜಿಂದಾಲ್ ಏರ್ ಸ್ಟ್ರಿಪ್ಗೆ ಆಗಮಿಸಿ, 04.30 ಕ್ಕೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವರು ಎಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಅಪರ ಕಾರ್ಯದರ್ಶಿ ಕೆ.ಚಿರಂಜೀವಿ ಅವರು ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read